
ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಎಲ್ ಪಿಜಿ ಗ್ಯಾಸ್ ಬಳಕೆದಾರರಿಗೆ ಬೆಲೆ ಏರಿಕೆ ಬಿಸಿತಟ್ಟಿದೆ. 19 ಕೆಜಿ ಕಮರ್ಷಿಯಲ್ ಎಲ್ಪಿಜಿ ಸಿಲಿಂಡರ್ಗಳ ಬೆಲೆ 75 ರೂ. ಹೆಚ್ಚಳವಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗಾಗಲೇ ಪರಿಷ್ಕೃತ ದರ ಜಾರಿಗೆ ಬಂದಿದ್ದು, ದೇಶಾದ್ಯಂತ ಇದೇ ದರ ನಿಗದಿಗೆ ನಿರ್ಧಾರ ಕೈಗೊಳ್ಳಲಾಗಿದೆ. ಈ ಬೆಲೆ ಏರಿಕೆ ಕೇವಲ ಕಮರ್ಷಿಯಲ್ ಸಿಲಿಂಡರ್ ಗೆ ಮಾತ್ರ ಅನ್ವಯವಾಗಲಿದೆ.
14.2 ಕೆಜಿ ತೂಕದ ಡೊಮೆಸ್ಟಿಕ್ ಸಬ್ಸಿಡಿರಹಿತ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.