Kannada NewsKarnataka NewsNationalPolitics

*ಎಲ್ ಪಿಜಿ ಗ್ಯಾಸ್ ಬೆಲೆ ಅಲ್ಪ ಇಳಿಕೆ*

ಪ್ರಗತಿವಾಹಿನಿ ಸುದ್ದಿ : ಈ ತಿಂಗಳ ಮೊದಲ ದಿನವೇ ಜನರಿಗೆ ಗುಡ್ ನ್ಯೂಸ್ ನೀಡಿದೆ. ಅಗತ್ಯ ವಸ್ತುಗ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಜನರಿಗೆ ಇದೀಗ ಗುಡ್ ನ್ಯೂಸ್ ಸಿಕ್ಕಿದ್ದು, ಮೇ ತಿಂಗಳ ಮೊದಲ ದಿನವೇ ಎಲ್ ಪಿಜಿ ಗ್ಯಾಸ್ ಗಳ ಬೆಲೆ 17 ರೂಪಾಯಿ ನಷ್ಟು ಕಡಿಮೆಯಾಗಿದೆ.

ರಾಷ್ಟ್ರ ರಾಜಧಾನಿ ನವದೆಹಲಿ ಹಾಗು ಕೋಲ್ಕತ್ತಾದಲ್ಲಿ ತೈಲ ಕಂಪೆನಿಗಳು 19 ಕೆಜಿ ವಾಣಿಜ್ಯ ಎಲ್ ಪಿಜಿ ಸಿಲಿಂಡ‌ರ್ ಗಳ ಬೆಲೆಯನ್ನು ಸುಮಾರು 17 ರೂಪಾಯಿ ನಷ್ಟು ಇಳಿಕೆ ಮಾಡಲಾಗಿದ್ದು, ಈ ದರ ಇಂದಿನಿಂದಲೇ ಜಾರಿಗೆ ಬರಲಿದೆ.

Home add -Advt

ಇನ್ನು, ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಈ ಹಿಂದೆ 1868.50 ರೂ.ಗಳಿತ್ತು, ಇದೀಗ 1851.50 ರೂ. ಗಳಷ್ಟಾಗಿದೆ. ಮುಂಬೈನಲ್ಲಿ 1713.50 ರೂ.ಗಳಿತ್ತು, ಇಂದಿನಿಂದ 1699 ರೂ. ಆಗಿದೆ. ಚೆನ್ನೈನಲ್ಲಿ 1921.50 ರೂ. ಇತ್ತು, ಈಗ 1906.50 ರೂ.ಗಳಾಗಿದೆ. ಈಗ ದೆಹಲಿಯಲ್ಲಿ 1747.50 ರೂ.ಗೆ ಲಭ್ಯವಿರುತ್ತದೆ.

Related Articles

Back to top button