Latest

ಎಂ.ಎ.ಹೆಗಡೆ ಸಾವಿಗೆ ಕೊರೋನಾ ಕಾರಣವಲ್ಲ….

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಎಂ.ಎ.ಹೆಗಡೆ ಅವರ ಸಾವಿಗೆ ಹೃದಯಾಘಾತ ಕಾರಣ. ಹೊರತು ಕೊರೊನಾ ಸೋಂಕು ಅಲ್ಲ. ಅವರ ಕೊರೋನಾ ವರದಿ ನೆಗೆಟಿವ್ ಬಂದಿತ್ತು ಎಂದು ತಿಳಿದುಬಂದಿದೆ.

ಎಂ.ಎ.ಹೆಗಡೆಯವರಿಗೆ ವಾರದ ಹಿಂದೆ ಕೊರೋನಾ ಪಾಸಿಟಿವ್ ಬಂದಿತ್ತು. ಆದರೆ ನಂತರದಲ್ಲಿ ಗುಣಮುಖರಾಗಿದ್ದರು. ಮತ್ತೆ ಪರೀಕ್ಷಿಸಿದಾಗ ನೆಗೆಟಿವ್ ಬಂದಿತ್ತು.

ಆದರೆ ಭಾನುವಾರ ಬೆಳಗ್ಗೆ ಮನೆಯಲ್ಲಿ ಅವರಿಗೆ ಹೃದಯಾಘಾತವಾಗಿದ್ದು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವಿಗೀಡಾದರು ಎಂದು ಅವರ ಸಹೋದರ ರಾಜಶೇಖರ ಜೋಗಿನ್ಮನೆ ಪ್ರಗತಿವಾಹಿನಿಗೆ ತಿಳಿಸಿದ್ದಾರೆ.

ಎಂ.ಎ ಹೆಗಡೆಯವರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಅವರ ಸಹೋದರ ಸ್ಪಷ್ಟನೆ ನೀಡಿದ್ದಾರೆ.

Home add -Advt

ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಪ್ರೊ.ಎಂ.ಎ.ಹೆಗಡೆ ಕೊರೊನಾಗೆ ಬಲಿ

 

 

 

Related Articles

Back to top button