
ಪ್ರಗತಿವಾಹಿನಿ ಸುದ್ದಿ: ಗಡಿನಾಡು ಕಾಗವಾಡದ ನಿವೃತ್ತ ಪ್ರಾಚಾರ್ಯ ಹಿರಿಯ ಸಾಹಿತಿ ಡಾ.ಎಂ. ಬಿ ಹೂಗಾರ ಇವರು ಬೆಳಗಾವಿಯ ಡಾ.ಡಿ.ಎಸ್ ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾನ ಕೊಡಮಾಡುವ ಡಾ. ಡಿ.ಎಸ್ ಕರ್ಕಿ ಕಾವ್ಯ ಪ್ರಶಸ್ತಿ -2025 ಕ್ಕೆ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 16ರಂದು ಬೆಳಿಗ್ಗೆ 11 ಗಂಟೆಗೆ ಡಾ. ಡಿ. ಎಸ್. ಕರ್ಕಿಯವರ 118ನೇ ಜನ್ಮದಿನೋತ್ಸವವಾದ ಅಂಗವಾಗಿ ಕಾವ್ಯ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕರ್ಕಿಯವರ ಹುಟ್ಟೂರಾದ ರಾಮದುರ್ಗ ಹಿರೇಕೊಪ್ಪ ಕೆ. ಎಸ್. ದಲ್ಲಿರುವ ಶ್ರೀ ಮಲ್ಲಿಕಾರ್ಜುನ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ಸಮಾರಂಭವು ಶ್ರೀ ಮ. ಫ. ಚ. ಡಾ. ಶಿವಲಿಂಗ ಮುರುಘರಾಜೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು ಇವರ ಸಮ್ಮುಖದಲ್ಲಿ ನಡೆಯುವದೆಂದು ಡಾ. ಡಿ. ಎಸ್. ಕರ್ಕಿ ಸಾಂಸ್ಕೃತಿಕ ಪ್ರತಿಷ್ಠಾಣ, ಬೆಳಗಾವಿ ಕಮೀಟಿ ವತಿಯಿಂದ ಹಾಗೂ ಹಿರೇಕೊಪ್ಪದಲ್ಲಿರುವ ಕರ್ಕಿ ಮನೆತನದ ಬಂದು ಬಳಗದವರಿಂದ ನಡೆಸಲಾಗುತ್ತಿದೆ ಎಂದು ಅಧ್ಯಕ್ಷ ಎಸ್ ಡಿ ಕರ್ಕಿ ಯವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ .



