*ಸಿಎಂ ಡಿನ್ನರ್ ಮೀಟಿಂಗ್ ನಲ್ಲಿ ನಡೆದ ಚರ್ಚೆಯೇನು? ಸಚಿವ ಎಂ.ಬಿ.ಪಾಟೀಲ್ ಹೇಳಿದ್ದೇನು?*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ನಿನ್ನೆ ರಾತ್ರಿ ಸಚಿವ ಸಂಪುಟದ ಸಹೋದ್ಯೋಗಿಗಳಿಗಾಗಿ ಡಿನ್ನರ್ ಪಾರ್ಟಿ ಏರ್ಪಡಿಸಿದ್ದರು. ಸಿಎಂ ಏರ್ಪಡಿಸಿದ್ದ ಔತಣಕೂಟದಲ್ಲಿ ಸಂಪುಟ ಪುನಾರಚನೆ, ಅಧಿಕಾರ ಹಂಚಿಕೆ, ಚುನಾವಣೆ ವಿಚಾರ ಸೇರಿದಂತೆ ಹಲವು ವಿಷಯಗಳು ಚರ್ಚೆಯಾಗಲಿದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಯಾವುದೇ ಚರ್ಚೆಯಾಗಿಲ್ಲ ಎನ್ನಲ್ಲಾಗಿದೆ.
ಸಿಎಂ ಏರ್ಪಡಿಸಿದ್ದ ಡಿನ್ನರ್ ಮೀಟಿಂಗ್ ಬಗ್ಗೆ ಮಾತನಾಡಿರುವ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಡಿನ್ನರ್ ಮೀಟಿಂಗ್ ನಲ್ಲಿ ಯಾವುದೇ ಸೀರಿಯಸ್ ವಿಷಯ ಚರ್ಚೆಯಾಗಿಲ್ಲ. ಸಹಜವಾಗಿ ಎಲ್ಲರೂ ಊಟಕ್ಕೆ ಸೇರಿದ್ದೆವು ಅಷ್ಟೇ ಎಂದಿದ್ದಾರೆ.
ಅಂತಹ ಯಾವುದೇ ರಾಜಕೀಯ ವಿಚಾರ ಚರ್ಚೆಯಾಗಿಲ್ಲ. ಊಟ ಚೆನ್ನಾಗಿತ್ತು. ನಾನು ದೋಸೆ, ಎರಡು ಇಡ್ಲಿ ತಿಂದೆ. ಬಹಳ ಚನ್ನಾಗಿತ್ತು ಎಂದು ಹೇಳಿದರು. ಸಂಪುಟ ಪುನಾರಚನೆ ವಿಚಾರವಾಗಲಿ, ಬೇರಾವ ರಾಜಕೀಯ ವಿಚಾರವಾಗಲಿ ಚರ್ಚೆಯಾಗಿಲ್ಲ ಎಂದರು.
ಕಲೆಕ್ಷನ್ ವಿಚಾರ ಚರ್ಚೆ ಎಂಬ ಬಿಜೆಪಿ ನಾಯಕರ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ನಮ್ಮಲ್ಲಿ ಯಾವುದೇ ಕಲೆಕ್ಷನ್ ವಿಚಾರ ಚರ್ಚೆ ನಡೆದಿಲ್ಲ. ಅದು ಬಿಜೆಪಿಯಲ್ಲಿ ಇರಬಹುದು. ಊಟಕ್ಕೆ ಸೇರಿ ಕಲೆಕ್ಷನ್ ವಿಚಾರ ಚರ್ಚಿಸುವುದು ಬಿಜೆಪಿಯಲ್ಲಿದೆ. ಅದು ಅವರ ಪದ್ಧತಿ ಎಂದು ಕಿಡಿಕಾರಿದರು.