ಕಾಂಗ್ರೆಸ್ ನಲ್ಲಿಯೂ ಲಿಂಗಾಯತ ನಾಯಕರಿದ್ದೇವೆ; ಸಿಎಂ ಅಭ್ಯರ್ಥಿ ಬಗ್ಗೆ ಹೊಸ ಚರ್ಚೆ ಹುಟ್ಟುಹಾಕಿದ ಎಂ.ಬಿ.ಪಾಟೀಲ್
ಪ್ರಗತಿವಾಹಿನಿ ಸುದ್ದಿ; ಮೈಸೂರು: ಕಾಂಗ್ರೆಸ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ, ಮಾತನಾಡಿರುವ ಎಂ.ಬಿ.ಪಾಟೀಲ್, ಈ ಬಗ್ಗೆ ಮಾತನಾಡದಂತೆ ಹೈಕಮಾಂಡ್ ಸೂಚಿಸಿದೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಇತಿಹಾಸದಲ್ಲೇ ಸಿಎಂ ಅಭ್ಯರ್ಥಿ ಘೋಷಿಸಿಲ್ಲ. ಕೆಲವರು ಅಭಿಮಾನದಿಂದ ಹೇಳಿಕೆ ನೀಡಿದ್ದಾರೆ ಅಷ್ಟೇ ಆದರೆ ಇಂತ ಚರ್ಚೆ ಸರಿಯಲ್ಲ ಎಂದು ಹೇಳಿದರು.
ಸುತ್ತೂರು ಮಠಕ್ಕೆ ಭೇಟಿ ನೀಡಿ ಮಾತನಾಡಿದ ಎಂ.ಬಿ.ಪಾಟೀಲ್, ಬಿಎಸ್ ವೈ ಅತಿದೊಡ್ಡ ನಾಯಕ, ಇದರಲ್ಲಿ ಅನುಮಾನವೇ ಇಲ್ಲ. ಆದರೆ ಲಿಂಗಾಯಿತರಲ್ಲಿ ಪರ್ಯಾಯ ನಾಯಕರೇ ಇಲ್ಲ ಎಂಬುದನ್ನು ನಾನು ಒಪ್ಪಲ್ಲ. ಕಾಂಗ್ರೆಸ್ ಪಕ್ಷದಲ್ಲಿಯೂ ಲಿಂಗಾಯತ ನಾಯಕರಿದ್ದಾರೆ. ನಾನು, ಶರಣ್ ಪ್ರಕಾಶ್ ಪಾಟೀಲ್, ಖಂಡ್ರೆ ಹೀಗೆ ಹಲವರು ನಾಯಕರಿದ್ದೇವೆ. ಇನ್ನು ಬಿಜೆಪಿಯಲ್ಲಿಯೂ ಶೆಟ್ಟರ್, ವಿ.ಸೋಮಣ್ಣ, ಉಮೇಶ್ ಕತ್ತಿ, ಅರವಿಂದ್ ಬೆಲ್ಲದ್, ಯತ್ನಾಳ್ ಸೇರಿದಂತೆ ಹಲವು ಲಿಂಗಾಯತ ನಾಯಕರಿದ್ದಾರೆ. ಹೀಗಾಗಿ ಬಿಎಸ್ ವೈ ಬಿಟ್ಟರೆ ಪರ್ಯಾಯ ನಾಯಕರಿಲ್ಲ ಎಂಬುದು ಸರಿಯಲ್ಲ ಎಂದರು.
ಎಲ್ಲರೂ ಸಿಎಂ ಸ್ಥಾನಕ್ಕೆ ಅರ್ಹರೇ. ಆದರೆ ಸ್ವಯಂ ಘೋಷಿಸಿಕೊಂಡವರಲ್ಲ ಸಿಎಂ ಆಗಲ್ಲ. ಚುನಾವಣೆಗೂ ಮೊದಲು ಮುಖ್ಯಮಂತ್ರಿ ಯಾರಾಗಬೇಕು ಎಂಬ ಚರ್ಚೆ ಅಪ್ರಸ್ತುತ. ಈ ಬಗ್ಗೆ ಚರ್ಚೆ ಸರಿಯಲ್ಲ ಎಂದು ಹೈಕಮಾಂಡ್ ಕೂಡ ಸೂಚಿಸಿದೆ ಎಂದು ಹೇಳಿದರು.
ಇಬ್ಬರನ್ನು ಭೇಟಿಯಾದ ಬಳಿಕ ರಮೇಶ್ ಜಾರಕಿಹೊಳಿ ಮಹತ್ವದ ನಿರ್ಧಾರ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ