*ಸಚಿವ ಎಂ.ಬಿ.ಪಾಟೀಲ್ ಬಗ್ಗೆ ಅವಹೇಳನಕಾರಿ ಪೋಸ್ಟ್; ಆರೋಪಿ ವಿರುದ್ಧ ದೂರು ದಾಖಲು*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಾಮಾಜಿಕ ಜಾಲತಾಣವಾದ ಫೇಸ್ಬುಕ್ ನಲ್ಲಿ ಬೃಹತ್ ಕೈಗಾರಿಕಾ ಮತ್ತು ಮೂಲಭೂತ ಅಭಿವೃದ್ಧಿ ಸೌಕರ್ಯಗಳ ಸಚಿವ ಎಂ.ಬಿ ಪಾಟೀಲರ ಫೋಟೋ ಹಾಕಿ ತೇಜೋವದೆ ಮಾಡುತ್ತಿರುವ ಫೇಸ್ಬುಕ್ ಖಾತೆಗಳನ್ನು ನಿರ್ವಹಿಸುತ್ತಿರುವ ವ್ಯಕ್ತಿಗಳ ವಿರುದ್ಧ ಕೆಪಿಸಿಸಿ ಕಾನೂನು, ಮಾನವ ಹಕ್ಕುಗಳು ಮತ್ತು ಮಾಹಿತಿ ಹಕ್ಕು ವಿಭಾಗದ ಕಾರ್ಯದರ್ಶಿ, ವಕೀಲ ಭೀಮನಗೌಡ ಹೈಗ್ರೌಂಡ್ಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಫೇಸ್ಬುಕ್ ಅಲ್ಲಿ ಮಲ್ಲೇಶ್ ನಾಯ್ಕ್ ಎಸ್ ಹೆಸರಿನ ಐಡಿ ಹೊಂದಿರುವ ವ್ಯಕ್ತಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ ಗುಂಡೂರಾವ್, ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಸಚಿವರಾದ ಬಿ, ಝೆಡ್, ಜಮೀರ್ ಅಹ್ಮದ್ ಖಾನ್ ಮತ್ತು ಇಂಧನ ಸಚಿವರಾದ ಕೆ. ಜೆ. ಜಾರ್ಜ್ ಅವರ ಜೊತೆಗೆ ಬೃಹತ್ ಕೈಗಾರಿಕೆ ಸಚಿವರಾದ ಎಂ.ಬಿ ಪಾಟೀಲ ಅವರು ಊಟ ಮಾಡುವ ಫೋಟೋ ಹಾಕಿ, ಆ ಫೋಟೋ, ಎಡಿಟ್ ಮಾಡಿ ಅದರಲ್ಲಿ ಇನ್ನುಳಿದ ಸಚಿವರ ಜೊತೆಗೆ ಸಚಿವ ಎಂ.ಬಿ ಪಾಟೀಲ ಅವರು ಕುಳಿತು ಊಟ ಮಾಡುತ್ತಿರುವ, ಅವರ ತಟ್ಟೆಯಲ್ಲಿ ಮಾಂಸಾಹಾರ ಇದ್ದು ಅದನ್ನು ಸೇವಿಸುತ್ತಿರುವಂತೆ ಎಡಿಟ್ ಮಾಡಿ ಫೋಟೋ ಅಪ್ ಲೋಡ್ ಮಾಡಿದ್ದಾನೆ. ಅಲ್ಲದೇ ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿರುವ ಫೋಟೋಗೆ ಮಲ್ಲೇಶ ನಾಯ್ಕ, “ಅವನಿಗೆ ಲಿಂಗಾಯತ ಪ್ರತ್ಯೇಕ ಧರ್ಮ ಬೇಕಂತೆ “ಅಂತಾ ಶೀರ್ಷಿಕೆ ನೀಡಿ ಫೋಟೋ ಕೆಳಗೆ ಲಿಂಗವಂತರ ಮುಖ್ಯಮಂತ್ರಿ ಎಂ.ಬಿ. ಪಾಟೀಲರ ತಟ್ಟೆಯಲ್ಲಿ ಬಸವಣ್ಣನ ಪ್ರಸಾದ -ಹೋಳಿಗೆ ಪಾಯಸ (ನಿಧಾನಕ್ಕೆ ಇಳಸ್ರಿ ಮೂಳೆ ಎಲ್ಲಾದ್ರೂ ಗಂಟಲಲ್ಲಿ ಸಿಕ್ಕಿದ್ರೆ ಕಷ್ಟ…?! ಎಂದು ಬರೆದುಕೊಂಡಿದ್ದಾನೆ.
ಈ ಪೋಸ್ಟ್ ಸಚಿವರ ಅವಹೇಳನ, ತೇಜೋವದೆ ಮಾಡುವ ಕುತಂತ್ರದ ಭಾಗವಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಸಚಿವರ ಬಗ್ಗೆ ತಪ್ಪು ಕಲ್ಪನೆ ಹರಡುವ ಮತ್ತು ಕೆಟ್ಟದ್ದಾಗಿ ಬಿಂಬಿಸುವ ಕುತಂತ್ರವಾಗಿದೆ. ಕೂಡಲೇ ಆರೋಪಿ ವ್ಯಕ್ತಿಯ ವಿರುದ್ಧಸಿ ಆರ್ ಪಿಸಿ ಸೆಕ್ಷನ್ 63, ಐಪಿಸಿ 153,199,500,505(1) ಅನ್ವಯ ಎಫ್ ಐ ಆರ್ ದಾಖಲಿಸಿ, ಸೂಕ್ತ ವಿಚಾರಣೆ ನಡೆಸಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ