Kannada NewsKarnataka NewsLatest

ಐಎಎಸ್ ಅಧಿಕಾರಿಗಳ ವರ್ಗಾವಣೆ: ಎಂ.ಜಿ.ಹಿರೇಮಠ ಬೆಳಗಾವಿ ಜಿಲ್ಲಾಧಿಕಾರಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು  – ರಾಜ್ಯದಲ್ಲಿ ಹಲವು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಬೆಳಗಾವಿ ಜಿಲ್ಲಾಧಿಕಾರಿಯಾಗಿ ಎಂ.ಜಿ.ಹಿರೇಮಠ ನೇಮಕವಾಗಿದ್ದಾರೆ. ಈಗಿನ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಳ್ಳಿ ನಾಳೆ ನಿವೃತ್ತಿರಾಗಲಿರುವ ಹಿನ್ನೆಲೆಯಲ್ಲಿ ಹಿರೇಮಠ ಅವರನ್ನು ನೇಮಕ ಮಾಡಲಾಗಿದೆ. ಹಿರೇಮಠ ಅವರು ಗದಗ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸರ್ವ ಶಿಕ್ಷಣ ಅಭಿಯಾನದ ಯೋಜನಾ ನಿರ್ದೇಶಕ ಡಾ.ಎಂ.ಟಿ.ರೇಜು ಅವರನ್ನು ಎನ್ ಎಲ್ ಎಂ ಮಿಶನ್ ಡೈರೆಕ್ಟರ್ ಆಗಿ ವರ್ಗಾಯಿಸಲಾಗಿದೆ.

ಧಾರವಾಡ ಜಿಲ್ಲಾಧಿಕಾರಿ ದೀಪಾ ಎಂ ಅವರನ್ನು ಸರ್ವಶಿಕ್ಷಣ ಅಭಿಯಾನ ಸ್ಟೇಟ್ ಪ್ರೊಜೆಕ್ಟ್ ಡೈರೆಕ್ಟರ್ ಆಗಿ ವರ್ಗಾಯಿಸಲಾಗಿದೆ.

ಎಸ್. ಜಿಯಾವುಲ್ಲಾ ಅವರನ್ನು ಎಂಎಸ್ಎಂಇ ನಿರ್ದೇಶಕ ಸ್ಥಾನದಿಂದ ಕೋಆಪರೇಟಿವ್ ಸೊಸೈಟೀಸ್ ನಿರ್ದೇಶಕರಾಗಿ ವರ್ಗಾಯಿಸಲಾಗಿದೆ.

ಬಿ.ಆರ್.ಮಮತಾ ಅವರನ್ನು ಎನ್ಆರ್ ಎಲ್ ಎಂ ಡೈರೆಕ್ಟರ್ ಹುದ್ದೆಯಿಂದ ಮೈಸೂರು ಶುಗರ್ ಕಂಪನಿ ಎಂಡಿಯಾಗಿ ವರ್ಗಾಯಿಸಲಾಗಿದೆ.

ಪೊಮ್ಮಲಾ ಸುನೀಲ್ ಕುಮಾರ ಅವರನ್ನು ಕೊಪ್ಪಳ ಜಿಲ್ಲಾಧಿಕಾರಿ ಹುದ್ದೆಯಿಂದ ಬಿಬಿಎಂಪಿ ವಿಶೇಷ ಕಮಿಶನರ್ ಆಗಿ ವರ್ಗಾಯಿಸಲಾಗಿದೆ.

ಹುದ್ದೆಯಿಲ್ಲದೆ ಕಾಯುತ್ತಿದ್ದ ಸುಂದರೇಶ ಬಾಬು ಅವರನ್ನು ಗದಗ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.

ಪವನ್ ಕುಂಮಾರ ಅವರನ್ನು ಪೈನಾನ್ಸ್ ಡಿಪಾರ್ಟ್ ಮೆಂಟ್ ಉಪಕಾರ್ಯದರ್ಶಿ ಹುದ್ದೆಯಿಂದ ಕಮರ್ಷಿಯಲ್ ಟ್ಯಾಕ್ಸ್ ಹೆಚ್ಚುವರಿ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ.

ಸುರಲಕರ್ ವಿಕಾಸ್ ಕಿಶೋರ ಅವರನ್ನು ಪರಿಕ್ಷಾ ಪ್ರಾಧಿಕಾರದಿಂದ ಕೊಪ್ಪಳ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.

ನಿತೇಶ್ ಕುಮಾರ ಅವರನ್ನು ಕಮರ್ಷಿಯಲ್ ಟ್ಯಾಕ್ಸ್ ನಿಂದ ಧಾರವಾಡ ಜಿಲ್ಲಾಧಿಕಾರಿಯಾಗಿ ವರ್ಗಾಯಿಸಲಾಗಿದೆ.

ಚಂದ್ರಶೇಖರ ನಾಯಕ ಅವರನ್ನು ಫೈನಾನ್ಸ್ ಉಪಕಾರ್ಯದರ್ಶಿ ಹುದ್ದೆಯಿಂದ ಬಜೆಟ್ ಆ್ಯಂಡ್ ರಿಸೋರ್ಸ್ ಉಪಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.

ಭೂಬಲನ್ ಟಿ ಅವರನ್ನು ತುಮಕೂರು ಮಹಾನಗರ ಪಾಲಿಕೆಯಿಂದ ಬಾಗಲಕೋಟೆ ಜಿಲ್ಲಾ ಪಂಚಾಯಿತಿ ಸಿಇಒ ಆಗಿ ವರ್ಗಾಯಿಸಲಾಗಿದೆ.

ಪಿ.ವಸಂತಕುಮಾರ ಅವರನ್ನು ಮೈಸೂರು ಶುಗರ್ ಕಂಪನಿಯಿಂದ ಬೆಂಗಳೂರು ಮೆಟ್ರೋ ಪಾಲಿಟಿನ್ ಕಮಿಶನರ್ ಆಗಿ ವರ್ಗಾಯಿಸಲಾಗಿದೆ.

ಗಂಗೂಬಾಯಿ ಮಾನಕರ್ ಅವರನ್ನು ಬಾಗಲಕೋಟೆ ಜಿಲ್ಲಾ ಪಂಚಾಯಿತಿಯಿಂದ ಅಟಲ್ ಜನಸ್ನೇಹಿ ಕೇಂದ್ರಕ್ಕೆ ವರ್ಗಾಯಿಸಲಾಗಿದೆ.

ಎಸ್ ಹೊನ್ನಂಬಾ ಅವರನ್ನು ಕರ್ನಾಟಕ ಏಡ್ಸ್ ಪ್ರಿವೆನ್ಶನ್ ಪ್ರೊಜೆಕ್ಟ್ ಡೈರೆಕ್ಟರ್ ಆಗಿ ವರ್ಗಾಯಿಸಲಾಗಿದೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button