ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಬಿಜೆಪಿಯ ಮತ್ತೋರ್ವ ನಾಯಕನ ಸಿಡಿ ಬಹಿರಂಗವಾಗಲಿದೆಯೇ ಎಂಬ ಊಹಾಪೋಹಗಳು ಇದೀಗ ರಾಜ್ಯ ರಾಜಕೀಯ ವಲಯದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.
ಸಿಎಂ ರಾಜಕೀಯ ಕಾರ್ಯದರ್ಶಿ, ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಸಿಡಿ ಬಹಿರಂಗವಾಗಲಿದೆ ಎನ್ನುವ ಸುದ್ದಿ ಜೋರಾಗು ಹಬ್ಬುತ್ತಿದ್ದು, ಅವರು ದಿಢೀರ್ ದೆಹಲಿಗೆ ಪ್ರಯಾಣ ಬೆಳೆಸಿದ್ದು ಇಂತದ್ದೊಂದು ಅನುಮಾನಕ್ಕೆ ಪುಷ್ಠಿ ನೀಡುವಂತಾಗಿದೆ.
ನಾಯಕತ್ವ ಬದಲಾವಣೆ ಚರ್ಚೆ ಬೆನ್ನಲ್ಲೇ ಸಿಡಿ ವಿಷಯ ಪ್ರಸ್ತಾಪವಾಗುತ್ತಿದ್ದಂತೆ ಆತಂಕಗೊಂಡಿರುವ ರೇಣುಕಾಚಾರ್ಯ, ದೆಹಲಿಯಲ್ಲಿ ವರಿಷ್ಠರ ಭೇಟಿಗೆ ತೆರಳಿದ್ದು, ಶಾಸಕರ ವಿರುದ್ಧ ವಿರೋಧಿಬಣಗಳು ಸಿಡಿ ಷಡ್ಯಂತ್ರ ನಡೆಸಿದೆಯೇ ಎಂಬ ಪ್ರಶ್ನೆ ಮೂಡಿಸಿದೆ. ಇದೇ ವೇಳೆ ರೇಣುಕಾಚಾರ್ಯ ಸಿಡಿ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ, ನನ್ನ ವಿರುದ್ಧ ಷಡ್ಯಂತ್ರ ನಡೆಸಿದ್ದರೆ ಅವರಿಗೆ ಒಳ್ಳೆಯದಾಗಲಿ ಎಂದು ಅಚ್ಚರಿ ಹೆಳಿಕೆ ನೀಡಿದ್ದಾರೆ.
ಆದರೆ ರಾಜಕೀಯದಲ್ಲಿ ಮಾತ್ರ ರೇಣುಕಾಚಾರ್ಯ ಸಿಡಿ ಬಹಿರಂಗವಾಗಲಿದೆ ಎನ್ನುವ ದಟ್ಟ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರಿಗೆ ಸಂಬಂಧಪಟ್ಟ ಸಿಡಿಗಳು ವಿರೋಧಿ ಬಣದ ಕೈಗೆ ಸಿಕ್ಕಿದ್ದು, ಇದೇ ಕಾರಣಕ್ಕಾಗಿ ಆತಂಕಕ್ಕೊಳಗಾಗಿ ದೆಹಲಿಗೆ ತೆರಳಿದ್ದು, ಕಾನೂನು ಹೋರಾಟದ ನಿಟ್ಟಿನಲ್ಲು ಯತ್ನ ನಡೆಸಲಿದ್ದಾರೆ ಎನ್ನಲಾಗಿದೆ.
ಕ್ಷೇತ್ರದ ಅಭಿವೃದ್ಧಿ ಕೆಲಸಕ್ಕಾಗಿ ದೆಹಲಿಗೆ ಬಂದಿದ್ದೇನೆ. ಯಾರ ಭೇಟಿಗೂ ನಾನು ಸಮಯ ಕೇಳಿಲ್ಲ, ಯಾರು ಸಿಗುತ್ತಾರೆ ಅವರನ್ನು ಭೇಟಿಯಾಗುತ್ತೇನೆ ಎಂದು ಹೇಳಿದ್ದಾರೆ.
ದಿನಸಿ ಅಂಗಡಿಯಲ್ಲಿ ಬೆಂಕಿ ದುರಂತ; ವ್ಯಕ್ತಿ ಸಜೀವ ದಹನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ