ಪ್ರಗತಿವಾಹಿನಿ ಸುದ್ದಿ; ಚೆನ್ನೈ: ಟಿವಿಯಲ್ಲಿ ಪ್ರಸಾರವಾಗುವ ಕಾಂಡೋಮ್ ಜಾಹಿರಾತು ಬಗ್ಗೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದ್ದು, ಇದು ಮಕ್ಕಳ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ ಎಂದು ಹೇಳಿದೆ.
ಮದ್ರಾಸ್ ಹೈಕೋರ್ಟ್ ನ ಮದುರೈ ಪೀಠ ಕಾಂಡೋಮ್ ಜಾಹೀರಾತಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದು, ಬಹುತೇಕ ಎಲ್ಲಾ ಚಾನಲ್ ಗಳು ರಾತ್ರಿ 10 ಗಂಟೆ ನಂತರ ಕಾಂಡೋಮ್ ಮಾರಾಟವನ್ನು ಬೆಂಬಲಿಸುವ ಜಾಹೀರಾತುಗಳನ್ನು ಪ್ರಸಾರ ಮಾಡುತ್ತವೆ. ಕೆಲ ಜಾಹೀರಾತುಗಳು ನೀಲಿ ಚಿತ್ರಗಳಂತಿವೆ ಎಂದು ಕಿಡಿಕಾರಿದೆ.
ಕಾಂಡೋಮ್ ಜಾಹೀರಾತಿನ ಮೂಲಕ ನಗ್ನತೆಯ ಮುಕ್ತ ಪ್ರದರ್ಶನ ಕಾನೂನಿನ ಪ್ರಕಾರ ಅಪರಾಧ. ಅಂಥವರಿಗೆ ಶಿಕ್ಷೆ ನೀಡುವ ಅವಕಾಶ ಕೂಡ ಕಾನೂನಿನಲ್ಲಿದೆ. ಈ ರೀತಿಯ ಜಾಹೀರಾತು ಪ್ರಸಾರದ ಮೇಲೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ