Latest

ಶಿವನ ವಿಶ್ರಾಂತಿಯ ಕಾಲ ಎಂದರೇನು ?

 ಪ್ರತಿದಿನ ಶಿವನು ರಾತ್ರಿಯ 4 ಪ್ರಹರಗಳಲ್ಲಿನ ಒಂದು ಪ್ರಹರ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ. ಶಿವನು ವಿಶ್ರಾಂತಿ ತೆಗೆದುಕೊಳ್ಳುವ ಒಂದು ಪ್ರಹರ ಎಂದರೆ ಭೂಮಿಯ ಮೇಲಿನ 3 ಗಂಟೆಗಳು (ಅಂದರೆ ದೇವರ ಅರ್ಧ ನಿಮಿಷ). ದೇವರ ಒಂದು ರಾತ್ರಿ ಎಂದರೆ ಭೂಮಿಯ ಮೇಲಿನ ಒಂದು ವರ್ಷ. ಭೂಮಿಯ ಮೇಲೆ ದಿನದಲ್ಲಿ 4 ಪ್ರಹರಗಳು ಮತ್ತು ರಾತ್ರಿಯಲ್ಲಿ 4 ಪ್ರಹರಗಳು ಹೀಗೆ 24 ಗಂಟೆಗಳಲ್ಲಿ ಒಟ್ಟು 8 ಪ್ರಹರಗಳಿವೆ. ಒಂದು ಪ್ರಹರವು 3 ಗಂಟೆಯದ್ದಾಗಿದೆ.

ಶಿವನ ಗಾಢ ನಿದ್ರಾವಸ್ಥೆಯ (ಪ್ರದೋಷಕಾಲದ) ಕಾಲದಲ್ಲಿ ಮಾಡಿದ ಉಪಾಸನೆಯ ಲಾಭ :

ಯಾವಾಗ ಶಿವನು ವಿಶ್ರಾಂತಿ ತೆಗೆದುಕೊಳ್ಳುತ್ತಾನೆಯೋ, ಆ 30 ಸೆಕೆಂಡುಗಳಲ್ಲಿಯೂ ಮಧ್ಯದ ಕೆಲವು ಕ್ಷಣ ಶಿವನ ಗಾಢ ನಿದ್ರಾವಸ್ಥೆ (ಸಮಾಧಿ ಅವಸ್ಥೆ) ಇರುತ್ತದೆ. ಅದಕ್ಕೆ ಪ್ರದೋಷ ಅಥವಾ ನಿಷಿದ್ಧಕಾಲ ಎನ್ನುತ್ತಾರೆ. ಭೂಮಿಯ ಮೇಲೆ ಈ ಕಾಲವು ಸಾಧಾರಣ ಒಂದರಿಂದ ಒಂದೂವರೆ ಗಂಟೆಗಳಷ್ಟು ಇರುತ್ತದೆ. ಪ್ರದೋಷ ಕಾಲದಲ್ಲಿ ಯಾವುದೇ ಮಾರ್ಗದಿಂದ, ಯಾವುದೇ ಜ್ಞಾನವಿಲ್ಲದೇ ಅಥವಾ ಗೊತ್ತಿಲ್ಲದೆಯೇ ನಮ್ಮಿಂದ ಶಿವನ ಉಪಾಸನೆಯಾದರೆ ಹಾಗೂ ಮಾಡಿದ ಉಪಾಸನೆಯಲ್ಲಿ ದೋಷವಿದ್ದರೂ ಶೇ. 100 ರಷ್ಟು ಫಲ ಸಿಗುತ್ತದೆ. ಈ ವರವನ್ನು ಶಂಕರನೇ ಕೊಟ್ಟಿದ್ದಾನೆ. ಈ ಪ್ರದೋಷ ಕಾಲದಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾರೆ. ಪ್ರದೋಷ ಕಾಲದಲ್ಲಿ ಮಾಡುವ ಅಭಿಷೇಕವನ್ನು ‘ಮಹಾ-ಅಭಿಷೇಕ’ ಎನ್ನುತ್ತಾರೆ. ಪ್ರದೋಷ ಕಾಲದಲ್ಲಿ ಶಿವನ ನಾಮಜಪ ಮಾಡುವುದರಿಂದ ಅನಿಷ್ಟ ಶಕ್ತಿಗಳ ತೊಂದರೆಯಾಗದಂತೆ ರಕ್ಷಣೆಯಾಗುತ್ತದೆ. ಭಗವಾನ ಶಂಕರನು ರಾತ್ರಿಯ ಒಂದು ಪ್ರಹರ ವಿಶ್ರಾಂತಿ ತೆಗೆದುಕೊಳ್ಳುತ್ತಾನೆ, ಆ ಪ್ರಹರವನ್ನೇ ‘ಮಹಾಶಿವರಾತ್ರಿ’ ಎನ್ನುತ್ತಾರೆ.

ಮಹಾಶಿವರಾತ್ರಿಯಂದು ಶಿವನ ಉಪಾಸನೆ ಮಾಡುವ ಶಾಸ್ತ್ರ ಈ ರೀತಿ ಇದೆ. ಶಿವನ ವಿಶ್ರಾಂತಿಯ ಸಮಯದಲ್ಲಿ ಶಿವತತ್ತ್ವದ ಕಾರ್ಯ ನಿಂತು ಹೋಗುತ್ತದೆ ಅಂದರೆ ಆ ಸಮಯದಲ್ಲಿ ಶಿವನು ಧ್ಯಾನಾವಸ್ಥೆಯಿಂದ ಸಮಾಧಿ ಅವಸ್ಥೆಗೆ ಹೋಗುತ್ತಾನೆ. ಶಿವನ ಸಮಾಧಿ ಸ್ಥಿತಿ ಅಂದರೆ ಶಿವನು ತನಗಾಗಿ ಸಾಧನೆ ಮಾಡುವ ಕಾಲ. ಆದುದರಿಂದ ಆ ಕಾಲದಲ್ಲಿ ಶಿವತತ್ವವು ವಿಶ್ವದಲ್ಲಿನ ಅಥವಾ ಬ್ರಹ್ಮಾಂಡದಲ್ಲಿನ ತಮೋಗುಣವನ್ನು ಸ್ವೀಕರಿಸುವುದಿಲ್ಲ. ಇದರಿಂದ ಬ್ರಹ್ಮಾಂಡದಲ್ಲಿ ತಮೋಗುಣವು ಬಹಳ ಹೆಚ್ಚಾಗುತ್ತದೆ ಅಥವಾ ಕೆಟ್ಟ ಶಕ್ತಿಗಳ ಒತ್ತಡವು ಪ್ರಚಂಡವಾಗಿರುತ್ತದೆ. ಅದರ ಪರಿಣಾಮ ನಮ್ಮ ಮೇಲಾಗಬಾರದೆಂದು ಅತೀ ಹೆಚ್ಚಿನ ಪ್ರಮಾಣದಲ್ಲಿ ಶಿವತತ್ವವನ್ನು ಆಕರ್ಷಿಸುವ ಬಿಲ್ವಪತ್ರೆ, ಬಿಳಿಹೂವು, ರುದ್ರಾಕ್ಷಿಗಳ ಮಾಲೆ ಇತ್ಯಾದಿಗಳನ್ನು ಶಿವಲಿಂಗಕ್ಕೆ ಅರ್ಪಿಸಿ ವಾತಾವರಣದಲ್ಲಿರುವ ಶಿವತತ್ತ್ವವನ್ನು ಆಕರ್ಷಿಸಲಾಗುತ್ತದೆ. ಇದರಿಂದ ಅನಿಷ್ಠ ಶಕ್ತಿಗಳಿಂದ ಹೆಚ್ಚಾಗಿರುವ ಒತ್ತಡವು ನಮಗೆ ಅಷ್ಟೊಂದು ಅರಿವಾಗುವುದಿಲ್ಲ. ಹಾಗಾಗಿ ನಾವೆಲ್ಲರೂ ಈ ಕಾಲದಲ್ಲಿ ಶಿವನ ತತ್ವದ ಲಾಭವನ್ನು ಪಡೆಯಲು ಹೆಚ್ಚು ಹೆಚ್ಚು ‘ಓಂ ನಮಃ ಶಿವಾಯ ನಾಮಜಪವನ್ನು ಮಾಡೋಣ. ಈ ನಾಮಜಪವು ಸನಾತನ-ನಿರ್ಮಿತ ಚೈತನ್ಯವಾಣಿ ಆಪ್ ನಲ್ಲಿ ಉಪಲಬ್ಧವಿದೆ, ಇದರ ಲಿಂಕ್ ಕೆಳಗಡೆ ನೀಡಲಾಗಿದೆ. ಓದುಗರು ಈ ಆಪ್ ಡೌನ್ಲೋಡ್ ಮಾಡಿ ಅದರ ಲಾಭವನ್ನು ಪಡೆಯಬಹುದು.

ಚೈತ್ರಾ ಕುಂದಪುರ ಪೊಲೀಸ್ ವಶಕ್ಕೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button