![](https://pragativahini.com/wp-content/uploads/2025/02/mobile-charge.jpg)
ಪ್ರಗತಿವಾಹಿನಿ ಸುದ್ದಿ: ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭ ಮೇಳ ಇನ್ನೇನು ಕೆಲವೇ ದಿನಗಳಲ್ಲಿ ಸಂಪನ್ನವಾಗಲಿದೆ. ಮಾಘ ಹುಣ್ಣಿಮೆ ಹಿನ್ನೆಲೆಯಲ್ಲಿ ಮಹಾಕುಂಭ್ಹ ಮೇಳದಲ್ಲಿ ಭಾಗಿಯಾಗಿ ತ್ರಿವೇಣಿ ಸಂಗಮದಲ್ಲಿ ಕೋಟ್ಯಂತರ ಭಕ್ತರು ಪುಣ್ಯಸ್ನಾನ ಮಾಡುತ್ತಿದ್ದಾರೆ. ಮಹಾಕುಂಭ ಮೇಳಕ್ಕೆ ಬರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ ಕೆಲವರು ಕುಂಭಮೇಳ ಸ್ಥಳದಲ್ಲಿ ತಮ್ಮ ವ್ಯಾಪಾರವನ್ನೂ ಆರಂಭಿಸಿದ್ದಾರೆ.
ಮಹಾಕುಂಭ ಮೇಳಕ್ಕೆ ಪ್ರತಿ ದಿನ ಲಕ್ಷಾಂತರ ಭಕ್ತರು ಹರಿದು ಬರುತ್ತಾರೆ. ಹೀಗೆ ಬರುವ ಭಕ್ತರಿಗೆ ಅಗತ್ಯವಿರುವ ಊಟೋಪಚಾರ, ವಸತಿ, ಬಟ್ಟೆ, ಮೊಬೈಲ್ ಚಾರ್ಜ್ ಹೀಗೆ ಕೆಲ ಮೂಲಭೂತ ಅಗತ್ಯತೆಯನ್ನು ಅರಿತು ಕೆಲವರು ತಮ್ಮದೇ ವ್ಯಾಪಾರವನ್ನೂ ಆರಂಭಿಸಿದ್ದಾರೆ. ಮಹಾಕುಂಭ ಮೇಳದಲ್ಲಿ ಯುವಕನೊಬ್ಬ ಜನರ ಮೊಬೈಲ್ ಚಾರ್ಜ್ ಮಾಡುವ ಮೂಲಕ ಗಂಟೆಗೆ 1,000 ರೂಪಾಯಿ ಸಂಪಾದಿಸುತ್ತಿರುವ ವಿಡಿಯೋ ಭಾರಿ ವೈರಲ್ ಆಗಿದೆ.
ಮಹಾಕುಂಭ ಮೇಳ ನಡೆಯುತ್ತಿರುವ ಪ್ರದೇಶದಲ್ಲಿ ವಿದ್ಯುತ್ ಕಂಬದ ಬಳಿ ವಿಸ್ತರಣಾ ಫಲಕ ಅಳವಡಿಸಿರುವ ಯುವಕ, ಜನರ ಮೊಬೈಲ್ ಫೋನ್ ಗಳನ್ನು ಚಾರ್ಜ್ ಮಾಡುತ್ತಾ ಹಣ ಸಂಪಾದಿಸುತ್ತಿದ್ದಾನೆ. ಫೋನ್ ಚಾರ್ಜ್ ಮಾಡಿಕೊಡಲು ಗಂಟೆಗೆ 50 ರೂಪಾಯಿ ವಿಧಿಸುತ್ತಾನೆ. ಹೀಗೆ ಒಮ್ಮೆಲೆ 20 ಫೋನ್ ಗಳನ್ನು ಚಾರ್ಜ್ ಮಾಡಿಕೊಡುವ ಮೂಲಕ ಗಂಟೆಗೆ 1000 ರೂಪಾಯಿ ಸಂಪಾದಿಸುತ್ತಿದ್ದಾನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ