*ಮಹಾಂತ ಶಿವಯೋಗಿ ಶಿಲಾಮೂರ್ತಿ ಪ್ರತಿಷ್ಟಾಪನೆ ಹಾಗೂ ಶಿವಧ್ಯಾನ ಮಂದಿರ ಉದ್ಘಾಟನೆಯಲ್ಲಿ ಪಾಲ್ಗೊಂಡ ಸಚಿವೆ ಹೆಬ್ಬಾಳ್ಕರ್*

ಪ್ರಗತಿವಾಹಿನಿ ಸುದ್ದಿ;ಮುರಗೋಡ: ಮುರಗೋಡ- ಸೂಗಲ ಕ್ಷೇತ್ರದ ಶ್ರೀ ಪಂಚವಟಿ ಮಹಾಂತ ಶಿವಯೋಗಿಶ್ವರ ಕಲ್ಯಾಣ ಕೇಂದ್ರದಲ್ಲಿ ಶತಮಾನದ ಶಿವಯೋಗಿ ಮಹನಾ ತಪಸ್ವಿ ಪರಮ ಪೂಜ್ಯ ಲಿಂ. ಶ್ರೀ ಮಹಾಂತ ಶಿವಯೋಗಿಗಳವರ ಶಿಲಾಮೂರ್ತಿ ಪ್ರತಿಷ್ಟಾಪನೆ ಹಾಗೂ ಮಹಾಂತ ಶಿವಧ್ಯಾನ ಮಂದಿರದ ನೂತನ ಕಟ್ಟಡದ ಉದ್ಘಾಟನೆಯ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮುಖ್ಯ ಅತಿಥಿಯಾಗಿ ಪಾಲ್ಗೊಂಡರು.

ಈ ಸಮಯದಲ್ಲಿ ಮುರಗೋಡ ದುರದುಂಡೇಶ್ವರ ಸಂಸ್ಥಾನ ಮಠದ ಶ್ರೀ ಮ.ನಿ.ಪ್ರ.ಸ್ವ ನೀಲಕಂಠ ಮಹಾಸ್ವಾಮಿಗಳು, ಮೈಸೂರಿನ ದುರದುಂಡೇಶ್ವರ ಬೇಬಿಗ್ರಾಮ ಚಂದ್ರವನ ಆಶ್ರಮದ ಶ್ರೀ ಮ.ನಿ.ಪ್ರ.ಸ್ವ ತ್ರಿನೇತ್ರ ಮಹಾಂತ ಸ್ವಾಮಿಗಳು, ಬೈಲಹೊಂಗಲ ಮೂರುಸಾವಿರ ಮಠದ ಶ್ರೀ ಮ.ನಿ.ಪ್ರ.ಸ್ವ ಪ್ರಭು ನೀಲಕಂಠ ಮಹಾಸ್ವಾಮಿಗಳು, ಅರಳೀಕಟ್ಟಿಯ ತೋಂಟದಾರ್ಯ ಮಠದ ಶ್ರೀ ಮ.ನಿ.ಪ್ರ.ಸ್ವ ಶಿವಮೂರ್ತಿ ಮಹಾಸ್ವಾಮಿಗಳು, ಗುಳೇದಗುಡ್ಡ ಒಪ್ಪತೇಶ್ವರ ಮಠದ ಶ್ರೀ ಮ.ನಿ.ಪ್ರ.ಸ್ವ ಒಪ್ಪತೇಶ್ವರ ಮಹಾಸ್ವಾಮಿಗಳು ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ