ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕೊರೋನಾ ನಿಯಂತ್ರಣ ಸಂಬಂಧ ಎಲ್ಲ ಜಾತಿ, ಧರ್ಮಗಳ ಮಠಾಧೀಶರು, ಧರ್ಮ ಗುರುಗಳು ಜನರಿಗೆ ವಿಶೇಷ ಸಂದೇಶ ನೀಡಬೇಕು ಎಂದು ವಿಧಾನ ಪರಿಷತ್ತಿನ ಸರಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಮನವಿ ಮಾಡಿದ್ದಾರೆ.
ಕಳೆದ ವರ್ಷದಲ್ಲಿ ಕರೋನಾ ಒಂದನೆ ಅಲೆಯಿಂದ ಹಾಗೂ ಇದೀಗ ಕರೋನಾ ಎರಡನೆಯ ಅಲೆಯಿಂದ ಇಡೀ ನಾಡು ಹಾಗೂ ದೇಶವು ತತ್ತರಿಸಿ ಹೋಗಿದೆ. ಆರೋಗ್ಯದ ತೊಂದರೆಯಿಂದ ಎಲ್ಲರೂ ಹೈರಾಣಾಗಿದ್ದಾರೆ. ಸರಕಾರವಂತೂ ಈ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ನಾನಾ ಬಗೆಯಾಗಿ ತನ್ನ ಶಕ್ತಿ ಮೀರಿ ಪ್ರಯತ್ನಿಸುತ್ತಲಿದೆ. ಜನರಲ್ಲಿ ಜಾಗೃತಿಯನ್ನು ಮಾಡಿ ಕಾಲಕಾಲಕ್ಕೆ ಹಲವಾರು ಮಾರ್ಗ ಸೂಚಿಗಳನ್ನು ಪ್ರಕಟಿಸುತ್ತಾ ಬರುತ್ತಿದೆ. ಏನೆ ಆದರೂ ಕರೋನಾ ಸೋಂಕಿನ ಎರಡನೆಯ ಅಲೆ ಎಲ್ಲೇಡೆಗೆ ತೀವ್ರ ಸಂಕಷ್ಟವನ್ನು ಸೃಷ್ಠಸಿದೆ.
ನಮ್ಮ ನಾಡಿನ, ದೇಶದ ಜನರು ಮೊದಲಿನಿಂದಲೂ ಧರ್ಮ, ದೇವರು, ಧರ್ಮ ಗುರುಗಳಲ್ಲಿ ಅಚಲವಾದ ನಂಬಿಕೆ, ಶ್ರದ್ದೆ, ಭಕ್ತಿ ನಿಷ್ಠಯನ್ನು ಹೊಂದಿದವರು ಯಾವುದೂ ಪರಿಣಾಮ, ಬದಲಾವಣೆ ಕಾಣದಾಗ ಧರ್ಮ ಅವರನ್ನು ಎತ್ತಿ ರಕ್ಷಣೆ ಮಾಡುವುದೆಂಬ ಬಲವಾದ ನಂಬಿಕೆ ಅವರಲ್ಲಿ ನೆಲೆಯೂರಿ ನಿಂತಿದೆ. ಆದ್ದರಿಂದ ತಾವು ತಮ್ಮ ಧರ್ಮ ಅನುಯಾಯಿಗಳಿಗೆ ಸರಕಾರವು ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರೊಂದಿಗೆ ಸಾಮಾಜಿಕ ಅಂತರ, ಮಾಸ್ಕ ಧರಿಸುವುದು, ಸ್ಯಾನೀಟೈಜರ ಬಳಕೆ ಮಾಡುವುದರ ಜೊತೆಗೆ ಮನೆಯಲ್ಲಿ ಇದ್ದು ಇಂದಿನ ಕರೋನಾ ಪರಿಸ್ಥಿತಿಯಿಂದ ಪಾರಾಗುವ ಅಂತಿಮ ಉಪಾಯ ಇದೊಂದೆ ಎಂಬ ಸಂದೇಶವನ್ನು ಪರಿಣಾಮಕಾರಿಯಾಗುವಂತೆ ನೀಡಬೇಕು.
ತಮ್ಮ ಈ ದಿವ್ಯ ಸಂದೇಶ ಜನರ ಮನಪರಿವರ್ತನೆಗೆ ಪೂರಕವಾಗುವುದೆಂಬುದನ್ನು ನಾನು ಬಲ್ಲೆನು. ತಮ್ಮ ಧರ್ಮಾನುಯಾಯಿಗಳ ನಾಡಿಮಿಡಿತವನ್ನು ಬಲ್ಲ ತಾವು ಅಂತಹ ಬದಲಾವಣೆಗೆ ಕಾರಣರಾಗಬೇಕೆಂದು ಕೋರುತ್ತಾನೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಲಾಕ್ ಡೌನ್ ಇನ್ನೂ 14 ದಿನ ವಿಸ್ತರಣೆ – ಸಿಎಂ ಘೋಷಣೆ (ವಿಡಿಯೋ ಸಹಿತ ವರದಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ