Latest
ಪೊಲೀಸ್ ಅಧಿಕಾರಿಗಳಿಬ್ಬರು ಸಸ್ಪೆಂಡ್

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಹಣ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ವಿಜಯಪುರ ಜಿಲ್ಲೆಯ ಡಿ ಎ ಆರ್ ನಲ್ಲಿ ಇರುವ ಎಎಸ್ಐ ಮತ್ತು ಪಿಎಸ್ಐ ಅಮಾನತುಗೊಳಿಸಿ ಎಸ್ಪಿ ಆದೇಶ ಹೊರಡಿಸಿದ್ದಾರೆ.
ಈ ಇಬ್ಬರು ಪೊಲೀಸ್ ಸಿಬ್ಬಂದಿ ಅಥಣಿ ಹಾಗೂ ತಿಕೋಟ ಮಾರ್ಗದಲ್ಲಿ ಸಂಚರಿಸುವ ಲಾರಿಗಳನ್ನು ತಡೆದು ಹಣ ವಸೂಲಿ ಮಾಡುತ್ತಿರುವ ಬಗ್ಗೆ ಇಂದು ಸಂಜೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿದಾಡಿದ್ದನ್ನು ಗಮನಿಸಿದ ಉಪ ಮುಖ್ಯ ಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅವರು ಕೂಡಲೇ ಸಂಬಂಧಪಟ್ಟ ವಿಜಯಪುರ ಎಸ್ಪಿ ಜೊತೆ ಮಾತನಾಡಿ ಈ ಬಗ್ಗೆ ಕ್ರಮ ಜರುಗಿಸುವಂತೆ ಸೂಚನೆ ನೀಡಿದ್ದರು.ಸೂಚನೆ ನೀಡಿದ ಕೂಡಲೇ ಹಣ ವಸೂಲಿ ದಂಧೆಯಲ್ಲಿ ತೊಡಗಿರುವ ತಿಕೋಟ ಠಾಣೆಯ A S I ಎಮ್.ಎಸ್ ವಾಲಿಕರ್ ಹಾಗೂ ಪಿಎಸ್ಐ ಯು.ಬಿ.ಚಿಗೊರಳ್ಳಿ ಎ.ಆರ್ ಅವರನ್ನು ಅಮಾನತುಪಡಿಸಿ ಆದೇಶ ನೀಡಿದ್ದಾರೆ.
ಕೋವಿಡ್ ಸಂಕಷ್ಟದಲ್ಲಿ ಸರಕು ಸಾಗಾಣೆ ಹೊತ್ತು ಸಂಚರಿಸುತ್ತಿರುವ ವಾಹನಗಳ ಬಳಿ ವಸೂಲಿಗೆ ನಿಂತಿದ್ದ ತಿಕೋಟಾ PSI ಹಾಗೂ ASI ಅವರನ್ನು ಅಮಾನತ್ತು ಗೊಳಿಸಲಾಗಿದೆ.




