Kannada NewsKarnataka NewsLatest
ಕೊರೋನಾ ಸಂಕಷ್ಟಕ್ಕೆ ಸಿಲುಕಿದ ಪತ್ರಕರ್ತನ ಕುಟುಂಬಕ್ಕೆ ನೆರವಾದ ಮಹಾಂತೇಶ ಕವಟಗಿಮಠ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ಚಿಕ್ಕೋಡಿಯ ಪತ್ರಕರ್ತರೊಬ್ಬರ ಇಡೀ ಕುಟುಂಬಕ್ಕೆ ಮಹಾಮಾರಿ ಕೊರೊನಾ ಒಕ್ಕರಿಸಿಕೊಂಡಿತ್ತು. ಸುಮಾರು 11 ದಿನ ಚಿಕಿತ್ಸೆ ಪಡೆದು ಸಂಕಷ್ಟದಿಂದ ಪಾರಾಯಾತು. ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಅವರು ವೈದ್ಯಕೀಯ ವೆಚ್ಚವನ್ನು ಭರಿಸುವ ಮೂಲಕ ನೆರವಾದರು.
ಚಿಕ್ಕೋಡಿಯ ಮರಾಠಿ ದಿನಪತ್ರಿಕೆಯ ವರದಿಗಾರನ ಇಡೀ ಕುಟುಂಬಕ್ಕೆ ಮಹಾಮಾರಿ ಕೊರೊನಾ ಒಕ್ಕರಿಸಿಕೋಂಡಿತ್ತು. ಈ ವಿಷಯವನ್ನು ತಿಳಿದ ಎಂ ಎಲ್ ಸಿ ಮಹಾಂತೇಶ ಕವಟಗಿಮಠ ಅವರು ಆ ಪತ್ರಕರ್ತನ ನೇರವಿಗೆ ಧಾವಿಸಿದರು. ಪತ್ರಕರ್ತ ಮತ್ತು ಅವರ ತಾಯಿ ಸ್ಥಳೀಯ ಕೆಎಲ್ಇ ಸಂಸ್ಥೆಯ ಆಸ್ಪತ್ರೆಗೆ ದಾಖಲಾಗಿ ಸುಮಾರು 11 ದಿನಗಳ ಕಾಲ ಚಿಕಿತ್ಸೆ ಪಡೆದಿದ್ದಾರೆ.
ಕೆಎಲ್ಇ ಸಂಸ್ಥೆಯ ನಿರ್ದೇಶಕರೂ ಆಗಿರುವ ಕವಟಗಿಮಠ ಯಾವುದೇ ಬಿಲ್ ಪಡೆಯದೆ ಅದನ್ನು ತಾವೇ ಭರಿಸಿದರು. ಕೊರೋನಾ ಸೋಂಕು ತಗುಲಿದ ದಿನದಿಂದ ಪ್ರತಿ ದಿನವೂ ಸಂಪರ್ಕಿಸಿ ಆರೋಗ್ಯ ವಿಚಾರಿಸಿದ್ದಲ್ಲದೆ, ವೈದ್ಯಕೀಯ ಸಿಬ್ಬಂದಿ ಕೂಡ ಸಮರ್ಪಕ ಚಿಕಿತ್ಸೆ ನೀಡುವಂತೆ ಕಾಳಜಿ ವಹಿಸಿದರು.
ಸಮಾಜಕ್ಕಾಗಿ ಸತತ ಕೆಲಸ ಮಾಡುವ ಪತ್ರಕರ್ತರು ಸಾಮಾನ್ಯವಾಗಿ ಆರ್ಥಿಕವಾಗಿ ಸಬಲರಿರುವುದಿಲ್ಲ. ಬಹುತೇಕ ರಾಜಕಾರಣಿಗಳು ಪ್ರಚಾರಕ್ಕಾಗಿ ಪತ್ರಕರ್ತರನ್ನು ಬಳಸಿಕೊಳ್ಳುತ್ತಾರೆಯೇ ವಿನಃ ಅವರ ಕಷ್ಟದಲ್ಲಿ ಸ್ಪಂದಿಸುವುದಿಲ್ಲ. ಆದರೆ ಇದಕ್ಕೆ ಅಪವಾದವೆನ್ನುವಂತೆ ಕವಟಗಿಮಠ ಈ ಪತ್ರಕರ್ತನ ಕುಟುಂಬದ ನೆರವಿಗೆ ನಿಂತಿದ್ದು ವಿಶೇಷವೆನಿಸಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ