Kannada NewsLatestNationalPolitics

*ಮಹಿಳೆಯ ಸೋಗಿನಲ್ಲಿ ಯುವಕನಿಂದ ಶಾಸಕರಿಗೆ ಲೈಂಗಿಕ ಕಿರುಕುಳ ಯತ್ನ*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಶಾಸಕರೊಬ್ಬರಿಗೆ ಮಹಿಳೆಯ ಸೋಗಿನಲ್ಲಿ ಯುವಕನೊಬ್ಬ ಲೈಂಗಿಕ ಕಿರುಕುಳ ಯತ್ನ ನಡೆಸಿರುವ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಬಿಜೆಪಿ ಶಾಸಕ ಶಿವಾಜಿ ಪಾಟೀಲ್ ಮಹಿಳೆಯೊಬ್ಬರು ತನಗೆ ಅಶ್ಲೀಲ ಮೆಸೇಜ್ ಗಳನ್ನು ಕಳುಹಿಸಿ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆಯೊಡ್ಡಿ, ಹಣಕ್ಕೆ ಬೇಡಿಕೆ ಇಟ್ಟಿದ್ದಾಗಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರೇ ಆರೋಪಿಯನ್ನು ಕಂಡು ಶಾಕ್ ಆಗಿದ್ದಾರೆ.

ಆರೋಪಿ ಮಹಿಳೆಯಲ್ಲ, ಓರ್ವ ನಿರುದ್ಯೋಗಿ ಯುವಕ ಎಂಬುದು ತನಿಖೆಯಲ್ಲಿ ಬಯಲಾಗಿದೆ. ಶಾಸಕರಿಗೆ ಮಹಿಳೆಯ ಹೆಸರಲ್ಲಿ ಅಶ್ಲೀಲವಾಗಿ ಚಾಟ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾನೆ. ಯುವಕ ಆರು ತಿಂಗಳ ಹಿಂದೆ ಕೆಲಸಕ್ಕಾಗಿ ಶಾಸಕ ಶಿವಾಜಿ ಪಾಟೀಲ್ ಅವರನ್ನು ಭೇಟಿಯಾಗಿದ್ದ. ಆದರೆ ಶಾಸಕರು ಯುವಕನನ್ನು ವಾಪಸ್ ಕಳುಹಿಸಿದ್ದರು. ಇದರಿಂದ ನೊಂದಿದ್ದ ಯುವಕ ಶಾಸಕರ ಮೊಬೈಲ್ ನಂಬರ್ ಪಡೆದು ಮಹಿಳೆಯ ಸೋಗಿನಲ್ಲಿ ಚಾಟಿಂಗ್ ಶುರುಮಾಡಿ ಬ್ಲ್ಯಾಕ್ ಮೇಲ್ ಮಾಡಲಾರಂಭಿಸಿದ್ದ. ಸದ್ಯ ಯುವಕನನ್ನು ಬಂಧಿಸಲಾಗಿದೆ.

Home add -Advt


Related Articles

Back to top button