ಪ್ರಗತಿವಾಹಿನಿ ಸುದ್ದಿ, ಮುಂಬೈ – ಗಡಿ ವಿವಾದ ಸರ್ವೋಚ್ಛ ನ್ಯಾಯಾಲಯದಲ್ಲಿ ಬಗೆಹರಿಯುವವರೆಗೆ ಯಾವುದೇ ಚಟುವಟಿಕೆ ನಡೆಸದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ತಾಖೀತಿನ ಹೊರತಾಗಿಯೂ ಮಹಾರಾಷ್ಟ್ರ ಗಡಿ ಉನ್ನತ ಮಟ್ಟದ ಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲ್ ಮಾನೆ ಸೋಮವಾರ ಬೆಳಗಾವಿಗೆ ಆಗಮಿಸಲಿದ್ದಾರೆ.
ಬೆಳಗಾವಿಯಲ್ಲಿ ನಡೆಯಲಿರುವ ಕರ್ನಾಟಕ ವಿಧಾನ ಮಂಡಳದ ಅಧಿವೇಶನದ ಆರಂಭದ ದಿನವೇ ಮಹಾರಾಷ್ಟ್ರ ಏಕೀಕರಣ ಸಮಿತಿ ಆಯೋಜಿಸಿರುವ ಮಹಾಮೇಳಾವದಲ್ಲಿ ಧೈರ್ಯಶೀಲ್ ಮಾನೆ ಭಾಗವಹಿಸಲಿದ್ದಾರೆ.
ಅವರ ತಮ್ಮ ಪ್ರವಾಸ ಪಟ್ಟಿಯನ್ನು ಬೆಳಗಾವಿ ಪೊಲೀಸರಿಗೆ ಕಳಿಸಿದ್ದು, ತಮಗೆ ವೈ ಕೆಟೆಗರಿ ಭದ್ರತೆ ಒದಗಿಸುವಂತೆ ಕೋರಿದ್ದಾರೆ. ಪ್ರತಿ ವರ್ಷ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಎಂಇಎಸ್ ಮಹಾಮೇಳಾವ ನಡೆಸುವ ಮೂಕ ಕನ್ನಡಿಗರನ್ನು ಕೆರಳಿಸುತ್ತಿದೆ.
ಈ ಬಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ತಾಕೀತು ಮಾಡಿದ್ದರೂ ಮಹಾಮೇಳಾವವೂ ನಿಲ್ಲುತ್ತಿಲ್ಲ. ಮಹಾರಾಷ್ಟ್ರ ನಾಯಕರ ಆಗಮನವನ್ನೂ ತಡೆಯಲಿಲ್ಲ.
ಧೈರ್ಯಶೀಲ್ ಮಾನೆ ಸೋಮವಾರ ಬೆಳಗ್ಗೆ 11.30ಕ್ಕೆ ಬೆಳಗಾವಿಗೆ ಆಗಮಿಸಿ ವ್ಯಾಕ್ಸಿನ್ ಡಿಪೋ ಮೈದಾನದಲ್ಲಿ ನಡೆಯಲಿರುವ ಮಹಾಮೇಳಾವದಲ್ಲಿ ಪಾಲ್ಗೊಂಡು 1.30ಕ್ಕೆ ನಿರ್ಗಮಿಸಲಿದ್ದಾರೆ.
ತನ್ಮೂಲಕ ಕೇಂದ್ರ ಗೃಹ ಸಚಿವರಿಗೇ ಮಹಾರಾಷ್ಟ್ರ ದೊಡ್ಡ ಸವಾಲೆಸೆದಿದೆ. ಅಮಿತ್ ಶಾ ಸಭೆ ಸಂಪೂರ್ಣ ನಿರರ್ಥಕವಾಗಿದೆ. ಅವರ ಮಾತಿಗೆ ಮಹಾರಾಷ್ಟ್ರ ಕವಡೆಕಾಸಿನ ಕಿಮ್ಮತ್ತನ್ನೂ ನೀಡಲಿಲ್ಲ.
ಈಗ ಕರ್ನಾಟಕ ಸರಕಾರ ಇದನ್ನು ಹೇಗೆ ಪ್ರತಿಭಟಿಸುತ್ತದೆ ಕಾದು ನೋಡಬೇಕಿದೆ.
ಉದ್ಧಟತನ ಮುಂದುವರಿಸಿದ ಎಂಇಎಸ್; ಅಮಿತ್ ಶಾಗೇ ಸವಾಲೆಸೆಯುವಂಥ ನಿರ್ಧಾರ?
https://pragati.taskdun.com/mes-continued-to-lash-out-amit-shahs-decision-to-challenge/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ