Kannada News

ಪ್ರಗತಿವಾಹಿನಿ ಮೊದಲೇ ಪ್ರಕಟಿಸಿತ್ತು- ಮಹಾರಾಷ್ಟ್ರ ಸಚಿವರಿಗೆ ಗಡಿಯಲ್ಲೇ ತಡೆ: ಜಿಲ್ಲಾಧಿಕಾರಿ ಆದೇಶ

ಪ್ರಗತಿ ವಾಹಿನಿ ಸುದ್ದಿ, ಬೆಳಗಾವಿ;

ಮಹಾರಾಷ್ಟ್ರದ ಇಬ್ಬರು ಸಚಿವರು ಹಾಗೂ ಓರ್ವ ಸಂಸದ ಮಂಗಳವಾರ ಬೆಳಗಾವಿಗೆ ಬರುವುದನ್ನು ನಿಷೇಧಿಸಿ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಆದೇಶ ಹೊರಡಿಸಿದ್ದಾರೆ.

೦೬.೧೨.೨೦೨೨ ರಂದು ಮಹಾರಾಷ್ಟ್ರದ ರಾಜ್ಯದ ಚಂದ್ರಕಾಂತ (ದಾದಾ) ಪಾಟೀಲ (ಮಹಾರಾಷ್ಟ್ರ ಸರಕಾರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ, ಜವಳಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವ) ಶಂಬುರಾಜ ದೇಸಾಯಿ (ಮಹಾರಾಷ್ಟ್ರ ಸರಕಾರದ ಅಬಕಾರಿ ರಾಜ್ಯ ಸಚಿವ) ಹಾಗೂ ಧೈರ್ಯಶೀಲ ಮಾನೆ (ಸಂಸದರು ) ಇವರು ಬೆಳಗಾವಿ ಜಿಲ್ಲೆಗೆ ಆಗಮಿಸಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರಿದ್ದು, ಆ ಸಂದರ್ಭದಲ್ಲಿ ಪ್ರಚೋದನಾಕಾರಿ ಭಾಷಣ ಅಥವಾ ಪ್ರಚೋದನಾಕಾರಿ ಹೇಳಿಕೆ ನೀಡುವ ಸಾಧ್ಯತೆಗಳು ಇರುತ್ತವೆ.

ಇದರಿಂದ ಭಾಷಾ ವೈಷಮ್ಯ ಬೆಳೆದು ಹೆಚ್ಚಿನ ಪ್ರಮಾಣದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುವ ಸಾಧ್ಯತೆಗಳಿರುತ್ತವೆ. ಆದು ಅಲ್ಲದೇ ಸಾರ್ವಜನಿಕರ ಆಸ್ತಿ ಪಾಸ್ತಿಗಳಿಗೆ ಹಾನಿ ಉಂಟಾಗುವುದನ್ನು ಹಾಗೂ ಕರ್ನಾಟಕದ ಮರಾಠಿ ನಿವಾಸಿಗರನ್ನು ಪ್ರಚೋದಿಸುವ ಸಾಧ್ಯತೆ ಇರುವುದರಿಂದ, ಬೆಳಗಾವಿ ಜಿಲ್ಲೆಯಲ್ಲಿ ಕಾನೂನು ಸುವ್ಯಸ್ಥೆಯನ್ನು ಹಾಗೂ ಸಾರ್ವಜನಿಕರ ನೆಮ್ಮದಿಯನ್ನು ಹಿತದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ, ೧೯೭೩ ಕಲಂ: ೧೪೪ (೩) ರನ್ವಯ  ಪ್ರದತ್ತವಾದ ಅಧಿಕಾರದ ಮೇರೆಗೆ ದಿನಾಂಕ: ೦೬.೧೨.೨೦೨೨ ರಂದು ಮಹಾರಾಷ್ಟ್ರ ರಾಜ್ಯದ ಸಚಿವರಾದ ಚಂದ್ರಕಾಂತ (ದಾದಾ) ಪಾಟೀಲ, ಶಂಬುರಾಜ ದೇಸಾಯಿ ಹಾಗೂ ಸಂಸದ ಧೈರ್ಯಶೀಲ ಮಾನೆ ಮಾನ್ಯ ಇವರು ಬೆಳಗಾವಿ ಜಿಲ್ಲೆಯ ಗಡಿಯೊಳಗೆ ಪ್ರವೇಶಿಸದಂತೆ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಲಾಗಿದೆ.

ಆದೇಶದ ಪ್ರತಿ ಇಲ್ಲಿದೆ – CRPC 144(3) ORDER

ಪ್ರಗತಿವಾಹಿನಿ  ಕಳೆದ ರಾತ್ರಿಯೇ ಪ್ರಕಟಿಸಿದ್ದ ಸುದ್ದಿ –

ಮಹಾ ಸಚಿವರಿಗೆ ಕೊಗನೋಳಿಯಲ್ಲೇ ತಡೆ : ಕರ್ನಾಟಕ ಸರಕಾರದ ಗಟ್ಟಿ ನಿರ್ಧಾರ?

 

https://pragati.taskdun.com/stopping-the-maharashtra-minister-in-koganoli-karnataka-governments-tough-decision/

SSLC ಪರೀಕ್ಷೆ: ಅಂತಿಮ ವೇಳಾಪಟ್ಟಿ ಪ್ರಕಟ

https://pragati.taskdun.com/sslc-examfinal-time-tableannounce/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button