६ डिसेंबर रोजी महामानव भारतरत्न डॉ. बाबासाहेब आंबेडकर यांच्या महापरिनिर्वाण दिनानिमित्त काही कार्यक्रमांना येण्याचा बेळगाव येथील आंबेडकरवादी संघटनांचा आग्रह आहे. त्यानुसार मी आणि समन्वयक मंत्री @shambhurajdesai आमचा ३ डिसेंबरचा बेळगाव प्रवास ६ डिसेंबरला करणार आहोत.@CMOMaharashtra
— Chandrakant Patil (@ChDadaPatil) December 1, 2022
ಪ್ರಗತಿವಾಹಿನಿ ಸುದ್ದಿ, ಮುಂಬೈ – ಮಹಾರಾಷ್ಟ್ರದ ಇಬ್ಬರು ಸಚಿವರು ಮತ್ತು ಗಡಿ ಸಲಹಾ ಸಮಿತಿ ಅಧ್ಯಕ್ಷರ ಭೇಟಿ ಹಠಾತ್ ಮುಂದೂಡಿಕೆಯಾಗಿದೆ.
ಮಹಾರಾಷ್ಟ್ರದ ಗಡಿ ಉಸ್ತುವಾರಿ ಸಚಿವ ಚಂದ್ರಕಾಂತ ಪಾಟೀಲ, ಇನ್ನೋರ್ವ ಸಚಿವ ಶಂಭುರಾಜ ದೇಸಾಯಿ ಮತ್ತು ಮಹಾರಾಷ್ಟ್ರ ಗಡಿ ಉನ್ನತಮಟ್ಟದ ಸಮಿತಿ ಅಧ್ಯಕ್ಷ, ಸಂಸದ ಧರ್ಮಶೀಲ್ ಮಾನೆ ಡಿ.3ರಂದು ಬೆಳಗಾವಿಗೆ ಆಗಮಿಸುವವರಿದ್ಜರು. ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಗೆ ಅವರ ಪ್ರವಾಸ ಪಟ್ಟಿ ಕಲಿಸಲಾಗಿದ್ದು,. ವೈ ಕೆಟೆಗರಿ ಭದ್ರತೆ ಒದಗಿಸುವಂತೆ ಕೋರಲಾಗಿತ್ತು.
ಬೆಳಗಾವಿಯ ಸುಮಾರು 20 ಪ್ರದೇಶಗಳಿಗೆ ಅವರು ಭೇಟಿ ನೀಡುವವರಿದ್ದರು. ಗಡಿ ವಿವಾದದ ಹಿನ್ನೆಲೆಯಲ್ಲಿ ಕನ್ನಡಿಗರನ್ನು ಕೆರಳಿಸುವ ಮತ್ತು ಮರಾಠಿ ಭಾಷಿಕರ ಕಣ್ಣೊರೆಸುವ ತಂತ್ರವಾಗಿ ಅವರ ಪ್ರವಾಸ ನಿಗದಿಯಾಗಿತ್ತು.
ಆದರೆ ಇದೀಗ ಅವರು ಪ್ರವಾಸ ಡಿ.6ಕ್ಕೆ ಮುಂದೂಡಿಕೆಯಾಗಿದೆ. ಈ ಕುರಿತು ಚಂದ್ರಕಾಂತ ಪಾಟೀಲ ಟ್ವೀಟ್ ಮಾಡಿದ್ದಾರೆ. ಅಂಬೇಡ್ಕರ್ ಮಹಾಪರಿನಿರ್ವಾಣ ದಿನವಾದ ಡಿ.6ರಂದು ಆಯೋಜಿಸಿರುವ ಕಾರ್ಯಕ್ರಮಕ್ಕೆ ಅಂಬೇಡ್ಕರ್ ವಾದಿ ಸಂಘಟನೆ ಆಹ್ವಾನ ನೀಡಿರುವ ಹಿನ್ನೆಲೆಯಲ್ಲಿ ಬೆಳಗಾವಿ ಭೇಟಿಯನ್ನು ಮುಂದೂಡಲಾಗಿದೆ ಎಂದು ಚಂದ್ರಕಾಂತ ಪಾಟೀಲ ತಿಳಿಸಿದ್ದಾರೆ.
https://pragati.taskdun.com/chief-minister-chandrakanta-patil-releases-belgaum-itinerary-what-will-he-do-in-belgaum-see/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ