ಪ್ರಗತಿವಾಹಿನಿ ಸುದ್ದಿ: ಮಹಾರಾಷ್ಟ್ರ ಹಾಗೂ ಜಾರ್ಖಂಡ್ ರಾಜ್ಯಗಳ ವಿಧಾನಸಭಾ ಚುನಾವಣೆ ಮುಕ್ತಾಯವಾಗಿದ್ದು, ಇದರ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳು ಕೂಡ ಹೊರಬಿದ್ದಿವೆ.
ಮಹಾರಾಷ್ಟ್ರದ 288 ಕ್ಷೇತ್ರಗಳಲ್ಲಿ ಇಂದು ಒಂದೇ ಹಂತದಲ್ಲಿ ಮತದಾನ ನಡೆದಿದ್ದು, ಚುನಾವಣೆ ಮುಕ್ತಾಯವಾಗಿದೆ. ಈ ಬಾರಿ ಮಹಾರಾಷ್ಟ್ರದಲ್ಲಿ ಯಾವ ಪಕ್ಷ ಸರ್ಕಾರ ರಚನೆ ಮಾಡಲಿದೆ ಎಂಬ ಕುತೂಹ ಹೆಚ್ಚಿದೆ. ಈಗಾಗಲೇ ಎಕ್ಸಿಟ್ ಪೋಲ್ ಕೂದ ಹೊರಬಿದ್ದಿದ್ದು, ಬಿಜೆಪಿ ಮೈತ್ರಿಕೂಟ ಮಹಾಯುತಿ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಿ-ಮಾರ್ಕ್ ಸಮೀಕ್ಷೆ ಪ್ರಕಾರ:
ಬಿಜೆಪಿ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ.
ಬಿಜೆಪಿ: 137-157
ಕಾಂಗ್ರೆಸ್: 126-146
ಇತರರು: 2-8
ಮ್ಯಾಟ್ರಿಜ್ ಸಮೀಕ್ಷೆ:
ಬಿಜೆಪಿ ನೇತೃತ್ವದ ಮಹಾಯುತಿ ಪಕ್ಷ ಗೆಲುವು ಸಾಧಿಸಲಿದೆ
ಬಿಜೆಪಿ: 150-170
ಕಾಂಗ್ರೆಸ್: 110-130
ಇತರರು: 08-10
ಪೀಪಲ್ಸ್ ಪಲ್ಸ್ :
ಆಡಳಿತಾರೂಢ ಮಹಾಯುತಿ ಗೆಲುವು
ಮಹಾಯುತಿ: 182 (175-195)
ಮಹಾವಿಕಾಸ್ ಅಘಾಡಿ: 97 (85-112)
ಇತರೆ: 9 (7-12)
ಚಾಣಕ್ಯ ಸ್ಟ್ರಾಟಜೀಸ್ ಸಮೀಕ್ಷೆ:
ಬಿಜೆಪಿ: 152-160
ಎಂವಿಎ: 130-138
ಮಹಾರಾಷ್ಟ್ರದಲ್ಲಿ ಸರ್ಕಾರ ರಚನೆಗೆ ಅಗತ್ಯವಿರುವ ಸಂಖ್ಯೆ 145. ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ನವೆಂಬರ್ 23ರಂದು ಪ್ರಕಟವಾಗಲಿದೆ.
ಜಾರ್ಖಂಡ್ ಚುನಾವಣೆ ಮತದಾನೋತ್ತರ ಸಮೀಕ್ಷೆ:
ಜಾರ್ಖಂಡ್ನಲ್ಲೂ ಬಿಜೆಪಿ ನೇತೃತ್ವದ ಎನ್ಡಿಎಗೆ ಬಹುಮತ ಸಿಗುವ ಸಾಧ್ಯತೆ ಇದೆ. ಕೆಲ ಸಮೀಕ್ಷೆಗಳ ಪ್ರಕಾರ ಮತ್ತೊಮ್ಮೆ ಜಾರ್ಖಂಡ್ನಲ್ಲಿ ಹೇಮಂತ್ ಸೊರೇನ್ ನೇತೃತ್ವದ ಸರ್ಕಾರ ರಚನೆಯಾಗಬಹುದು ಎಂದಿವೆ.
ಮ್ಯಾಟ್ರಿಜ್ ಸಮೀಕ್ಷೆ:
ಎನ್‌ಡಿಎ ಅಧಿಕಾರಕ್ಕೆ
ಎನ್‌ಡಿಎ: 42-47 ಸ್ಥಾನ
ಕಾಂಗ್ರೆಸ್: 25-30
ಇತರರು: 1-4 ಸ್ಥಾನ
ಪೋಲ್ ಆಫ್ ಪೋಲ್ ಸಮೀಕ್ಷೆ:
ಎನ್‌ಡಿಎ: 47 ಸ್ಥಾನ
ಕಾಂಗ್ರೆಸ್: 30
ಇತರರು: 4 ಸ್ಥಾನ
ಟೈಮ್ಸ್ ನೌ ಸಮೀಕ್ಷೆ:
ಎನ್‌ಡಿಎ: 40-44
ಕಾಂಗ್ರೆಸ್: 30-40
ಇತರರು: 1 ಸ್ಥಾನ
ಅಗ್ನಿ ನ್ಯೂಸ್:
ಬಿಜೆಪಿ: 42
ಕಾಂಗ್ರೆಸ್: 36
ಇತರೆ: 3
ಪೀಪಲ್ ಪಲ್ಸ್ ಸಮೀಕ್ಷೆ:
ಬಿಜೆಪಿ: 44-53
ಕಾಂಗ್ರೆಸ್: 25-32
ಇತರೆ: 5-9
ಆ್ಯಕ್ಸಿಸ್ ಮೈ ಇಂಡಿಯಾ ಸಮೀಕ್ಷೆ:
ಇಂಡಿಯಾ ಮೈತ್ರಿಕೂಟಕ್ಕೆ ಅಧಿಕಾರ
ಇಂಡಿಯಾ ಮೈತ್ರಿಕೂಟ: 53
ಎನ್‌ಡಿಎ: 25
ಇತರರು: 3
81 ಸದಸ್ಯ ಬಲದ ಜಾರ್ಖಂಡ್ ಅಸೆಂಬ್ಲಿ ಚುನಾವಣೆ ಫಲಿತಾಂಶ 23ರಂದು ಹೊರಬೀಳಲಿದ್ದು, ಯಾವ ಪಕ್ಷ ಗೆಲುವು ಸಾಧಿಸಲಿದೆ ಎಂಬುದು ಕಾದುನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ