ಪ್ರಗತಿವಾಹಿನಿ ಸುದ್ದಿ; ಮುಂಬೈ: ದೇಶದಲ್ಲಿ ಕೊರೊನಾ ಸೋಂಕು ಅಟ್ಟಹಾಸ ಮುಂದುವರೆಸಿದ್ದು, ಈ ನಡುವೆ ಸಚಿವರುಗಳಿಗೂ ಕೊರೊನಾ ಸೋಂಕು ಹರಡುತ್ತಿದೆ. ಮಹಾರಾಷ್ಟ್ರದ ವಸತಿ ಸಚಿವ ಜಿತೇಂದ್ರ ಅವ್ಹಾದ್ ಅವರಿಗೆ ಕೊರೊನಾ ಸೋಂಕು ತಗುಲಿದ ಬೆನ್ನಲ್ಲೇ ಇದೀಗ ಲೋಕೋಪಯೋಗಿ ಸಚಿವ ಅಶೋಕ್ ಚವಾಣ್ ಅವರಿಗೂ ಕೊರೊನಾ ದೃಢಪಟ್ಟಿದೆ.
ಈ ಮೂಲಕ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಕ್ಯಾಬಿನೆಟ್‍ನ ಇಬ್ಬರು ಸಚಿವರಿಗೆ ಕೊರೊನಾ ಸೋಂಕು ತಗುಲಿದಂತಾಗಿದ್ದು, ಮಹಾ ಸಚಿವ ಸಂಪುಟವೇ ಆತಂಕಕ್ಕೀಡಾಗಿದೆ.
ವಸತಿ ಸಚಿವ ಜಿತೇಂದ್ರ ಅವ್ಹಾದ್ ಅವರಿಗೆ ಸೋಂಕು ತಗುಲಿದ್ದರಿಂದ ಅವರು ಚಿಕಿತ್ಸೆ ಪಡೆದು ಡಿಸ್‍ಚಾರ್ಜ್ ಆಗಿದ್ದರು. ಇದೀಗ ಲೋಕೋಪಯೋಗಿ ಸಚಿವ ಅಶೋಕ್ ಚವಾಣ್ ಅವರಿಗೂ ಸೋಂಕು ತಗುಲಿದೆ. ಸಚಿವರನ್ನು ನಾಂದೇಡ್‍ನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಸಚಿವರು ಮುಂಬೈ ಹಾಗೂ ಅವರ ಜಿಲ್ಲೆ ಮಾರಥ್ವಾಡಕ್ಕೆ ಪದೇ ಪದೇ ಸಂಚರಿಸಿದ್ದರಿಂದ ಈ ವೇಳೆ ಕೊರೊನಾ ಸೋಂಕು ಹರಡಿರುವ ಸಾಧ್ಯತೆ ಹೆಚ್ಚಿದೆ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ