Latest

ಇಂದು 93 ಜನರಲ್ಲಿ ಕೊರೊನಾ ಸೋಂಕು ಪತ್ತೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಇಂದು 93 ಜನರಲ್ಲಿ ಕೊರೊನಾ ಪಾಸಿಟೀವ್ ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 2182 ಕ್ಕೆ ಏರಿಕೆಯಾಗಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ಪ್ರಕಾರ ಉಡುಪಿ 32, ಕಲಬುರಗಿ 16, ಯಾದಗಿರಿ 15, ಬೆಂಗಳೂರು 8, ಮಂಡ್ಯ 2, ದಕ್ಷಿಣ ಕನ್ನಡ 4, ಧಾರವಾಡ 4, ಬಳ್ಳಾರಿ 3, ಕೋಲಾರ 2, ಹಾಸನ, ವಿಜಯಪುರ, ತುಮಕೂರು, ಉತ್ತರ ಕನ್ನಡ, ಬೀದರ್, ಬೆಳಗಾವಿ, ರಾಮನಗರ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ಪತ್ತೆಯಾಗಿದೆ.

Home add -Advt

93 ಸೋಂಕಿತರಲ್ಲಿ 73 ಜನರು ಮಹಾರಾಷ್ಟ್ರದಿಂದ ಬಂದಿರುವರೇ ಆಗಿದ್ದಾರೆ. ದಕ್ಷಿಣ ಕನ್ನಡದಲ್ಲಿ ಕೊರೊನಾಗೆ ಮತ್ತೊಂದು ಬಲಿಯಾಗಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 7ಕ್ಕೆ ಏರಿಕೆಯಾಗಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾಗೆ 44 ಮಂದಿ ಬಲಿಯಾಗಿದ್ದಾರೆ.

ಇನ್ನು ರಾಜ್ಯದಲ್ಲಿ 2182 ಕೊರೊನಾ ಸೋಂಕಿತರ ಪೈಕಿ 705 ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ರಾಜ್ಯದಲ್ಲಿ ಸೋಂಕಿಗೆ 44 ಜನ ಬಲಿಯಾಗಿದ್ದಾರೆ.

Related Articles

Back to top button