Kannada NewsLatestUncategorized

*ಮಹಾಶಿವರಾತ್ರಿ ಮಹೋತ್ಸವ; ನಿಡಸೋಸಿಯ ಜಗದ್ಗುರು ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ*

ಪ್ರಗತಿವಾಹಿನಿ ಸುದ್ದಿ; ಸಂಕೇಶ್ವರ:  ಗಡಿಜಿಲ್ಲೆಯ ಶಕ್ತಿಪೀಠ ಅಂತಲೇ ಗುರುತಿಸಿಕೊಂಡಿರುವ ಇಲ್ಲಿಗೆ ಸಮೀಪದ ನಿಡಸೋಸಿಯ ಜಗದ್ಗುರು ದುರದುಂಡೀಶ್ವರ ಸಿದ್ಧ ಸಂಸ್ಥಾನ ಮಠದಲ್ಲಿ ಫೆ.೭ರಿಂದ ಫೆ.೧೯ರವರೆಗೆ ಮಹಾಶಿವರಾತ್ರಿ ಮಹೋತ್ಸವ ನಿಮಿತ್ತ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ.

ದಿ.೭ರಂದು ಸಾ.೭ಗಂಟೆಗೆ ನಮ್ಮ ಇತಿಹಾಸ ನಮ್ಮ ಹೆಮ್ಮೆ ಪ್ರವಚನ ಪ್ರಾರಂಭೋತ್ಸವ ಕಾರ್ಯಕ್ರಮ ಜರುಗಲಿದ್ದು, ಸಾನಿಧ್ಯವನ್ನು ನೇಜದ ಶಿಕ್ಷಕ ವಿರೇಶ ಶರಣರು ೧೧ ದಿನಗಳ ಕಾಲ ಪ್ರವಚನ ಸಾರಲಿದ್ದಾರೆ. ಸಂಗೀತಗಾರ ಸಂಕೇಶ್ವರದ ಸುರೇಶ ಚಂದರಗಿ, ತಬಲಾ ಮಾಸ್ಟರ ಹೆಬ್ಬಾಳದ ಭರತ ವಿಟೇಕರ ಉಪಸ್ಥಿತರಿರಲಿದ್ದಾರೆ.

ದಿ.೮ರಂದು ಸಾ.೭ಗಂಟೆಗೆ ಘೋಡಗೇರಿ ಶಿವಾನಂದ ಮಠದ ಮಲ್ಲಯ್ಯ ಸ್ವಾಮೀಜಿ, ಮಜಲಟ್ಟಿಯ ಬಸವಪ್ರಭು ಮಹಾರಾಜರು, ದಿ.೯ರಂದು ಸಾ.೭ಗಂಟೆಗೆ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಜೋಡಕುರಳಿ ಸಿದ್ಧಾರೂಢ ಮಠದ ಚಿಧ್ವನಾನಂದ ಸ್ವಾಮೀಜಿ ಸಾನಿಧ್ಯವಹಿಸಲಿದ್ದು, ಅತಿಥಿಗಳಾಗಿ ಚಿಕ್ಕೋಡಿ ಉಪವಿಭಾಗಾಧಿಕಾರಿ ಮಾಧವ ಗಿತ್ತೆ ಆಗಮಿಸಲಿದ್ದು, ಬೆಳಗಾವಿಯ ರಾಜೇಶ್ವರಿ ಗುರವ ವಚನ ಭಕ್ತಿಗೀತೆ ಕಾರ್ಯಕ್ರಮ ಜರುಗಲಿದೆ.
ದಿ.೧೦ರಂದು ಸಾ.೭ಗಂಟೆಗೆ ಘಟಪ್ರಭಾ ಗುಬ್ಬಲಗುಡ್ಡ ಕೆಂಪಯ್ಯಸ್ವಾಮಿ ಮಠದ ಡಾ.ಮಲ್ಲಿಕಾರ್ಜುನ ಸ್ವಾಮೀಜಿ, ಕಮತೇನಟ್ಟಿ ಪ್ರಭುಲಿಂಗೇಶ್ವರ ಮಠದ ಗುರುದೇವ ದೇವರು ಸಾನಿಧ್ಯವಹಿಸಲಿದ್ದು, ಅತಿಥಿಗಳಾಗಿ ವಿಜಯಪುರದ ಉದ್ಯಮಿ ಮಲ್ಲಿಕಾರ್ಜುನ ಕಡಪಟ್ಟಿ, ಆದಿಚುಂಚನಗಿರಿಮಠದ ಆಡಳಿತಾಧಿಕಾರಿ ಡಾ.ಜೆ.ಎನ್.ರಾಮಕೃಷ್ಣೇಗೌಡ ಆಗಮಿಸಲಿದ್ದಾರೆ.

ದಿ.೧೧ ರಂದು ಸಾ.೭ಗಂಟೆಗೆ ಕುಂದರಗಿ ಅಡವಿಸಿದ್ಧೇಶ್ವರ ಮಠದ ಅಡವಿಸಿದ್ಧೇಶ್ವರ ಸ್ವಾಮೀಜಿ, ಅತಿಥಿಗಳಾಗಿ ಬೆಳಗಾವಿ ಪಶುಸಂಗೋಪನಾ ಉಪನಿರ್ದೇಶಕ ರಾಜೇಂದ್ರ ಕುಲೇರ ಆಗಮಿಸಲಿದ್ದು, ಸಾಣಿಹಳ್ಳಿ ತಂಡದಿಂದ ಸಂಗೀತ ಸೇವೆ ಜರುಗಲಿದೆ. ಅಲ್ಲದೇ ಎಸ್‌ಜೆಪಿಎನ್ ಸಿಬಿಎಸ್‌ಸಿ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.

ದಿ.೧೨ರಂದು ಸಾ.೭ಗಂಟೆಗೆ ಗೌರಿಗದ್ದೆಯ ವಿನಯ ಗುರುಜಿ ಸಾನಿಧ್ಯವಹಿಸಲಿದ್ದು, ಶಿವಮೊಗ್ಗದ ಉದ್ಯಮಿ ಪರ್ವತಮಲ್ಪಪ್ಪ ವಿ.ಸಿ. ದಿ.೧೩ರಂದು ಸಾ.೭ಗಂಟೆಗೆ ಇಂಚಲದ ಡಾ.ಶಿವಾನಂದ ಭಾರತಿ ಸ್ವಾಮೀಜಿ ಸಾನಿಧ್ಯವಹಿಸಲಿದ್ದು, ಡಾ.ಗುರುಪಾದ ಮರಿಗುದ್ದಿ ಹಾಗೂ ವಿಜಯಕುಮಾರ ಕಟಗಿಹಳ್ಳಿಮಠ ವಿರಚಿತ ನಿರುಪಾಧೀಶ ವಲಯ ಉಕ್ತಿಸಂಪದ ಗ್ರಂಥ, ಮಲ್ಲಿಕಾರ್ಜುನ ತಳವಾರ ಹಾಗೂ ಶಂಕರ ಡಬರಿ ವಿರಚಿತ ಭಾವದೊಳಗಣ ಗಂಧ, ನಿರುಪಾದೀಶ ಮರೆಗುದ್ದಿ ವಿರಚಿತ ಮಂಗಳಾರತಿ ಪದಗಳು ಹಾಗೂ ಸಿದ್ದರಾಮನ ಚಾರಿತ್ರಿಕತೆ ಒಂದು ನೋಟ ಗ್ರಂಥಗಳು ಸೇರಿ ೪ ಗ್ರಂಥಗಳು ಲೋಕಾರ್ಪಣೆಯಾಗಲಿವೆ.
ದಿ.೧೪ರಂದು ಸಾ.೭ಗಂಟೆಗೆ ಸಂಕೇಶ್ವರ ಶಂಕರಾಚಾರ್ಯ ಸಂಸ್ಥಾನಮಠದ ಸಚ್ಚಿದಾನಂದ ಅಭಿನವ ವಿದ್ಯಾನರಸಿಂಹ ಭಾರತಿ ಸ್ವಾಮೀಜಿ ಸಾನಿಧ್ಯವಹಿಸಲಿದ್ದು, ಚಿಕ್ಕೋಡಿಯ ವೈದ್ಯ ಡಾ.ಮರುಳಶಂಕರ ದೇವರು ಗ್ರಂಥ ಲೋಕಾರ್ಪಣೆಯಾಗಲಿದ್ದು, ಸಾಹಿತಿ ಡಾ.ಸುಬ್ರಾವ ಎಂಟೆತ್ತಿನವರ ಉಪನ್ಯಾಸ ನೀಡಲಿದ್ದಾರೆ. ಶ್ರೀಮಠದ ಬಿಲ್ವಾಶ್ರಮ ಆಧರಿತ ಗುರುಪಾದಪ್ಪ ತುಬಚಿ ಜೀವನ ಚರಿತ್ರೆ ಎಂಬ ಕಿರುಚಿತ್ರ ಬಿಡುಗಡೆಯಾಗಲಿದೆ.

ದಿ.೧೫ರಂದು ಶ್ರೀಮಠದ ೭ನೇ ಪೀಠಾಧಿಪತಿ ನೇರಲಿಯ ಚತುರ್ಥ ನಿಜಲಿಂಗೇಶ್ವರ ಸ್ವಾಮಿಗಳ ಪುಣ್ಯಸ್ಮರಣೋತ್ಸವ ಹಾಗೂ ಬಿಲ್ವವನದ ಜಾತ್ರಾಮಹೋತ್ಸವ ಸಾ.೭ಗಂಟೆಗೆ ಹಂದಿಗುಂದದ ಶಿವಾನಂದ ಸ್ವಾಮೀಜಿ, ಯರನಾಳ ಕಾಳಿಕಾಮಠದ ಬ್ರಹ್ಮಾನಂದ ಅಜ್ಜನವರು ಸಾನಿಧ್ಯವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ವಿಪ ಮಾಜಿ ಸಚೇತಕ ಮಹಾಂತೇಶ ಕವಟಗಿಮಠ ಆಗಮಿಸಲಿದ್ದಾರೆ.
ದಿ.೧೬ರಂದು ಸಾ.೭ಗಂಟೆಗೆ ಹುಕ್ಕೇರಿ ವಿರಕ್ತಮಠದ ಶಿವಬಸವ ಸ್ವಾಮೀಜಿ ಸಾನಿಧ್ಯವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಎ.ಬಿ.ಪಾಟೀಲ, ಶಾಸಕರಾದ ಲಕ್ಷ್ಮೀ ಹೆಬ್ಬಾಳಕರ, ಗಣೇಶ ಹುಕ್ಕೇರಿ, ವಿನಯ ಪಾಟೀಲ, ರಾಹುಲ ಜಾರಕಿಹೊಳಿ, ವೃಷಭ ಪಾಟೀಲ, ಮೃಣಾಲ ಹೆಬ್ಬಾಳಕರ ಆಗಮಿಸಲಿದ್ದಾರೆ.
ದಿ.೧೭ರಂದು ಮುಂ.೯ ಗಂಟೆಗೆ ನಣದಿಯ ವಿಜಯಸಿಂಹ ನಿಂಬಾಳಕರ ಸರದೇಸಾಯಿ ಅವರಿಂದ ಚಾಂದಣಿ ಪೂಜೆ ಜರುಗಲಿದೆ. ಸಾ.೭ಗಂಟೆಗೆ ಪ್ರವಚನ ಮಹಾಮಂಗಲೋತ್ಸವ ಕಾರ್ಯಕ್ರಮ ಜರುಗಲಿದ್ದು, ಹಾರನಹಳ್ಳಿ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಸಾನಿಧ್ಯವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಸಚಿವೆ ಶಶಿಕಲಾ ಜೊಲ್ಲೆ, ಬೆಳಗಾವಿ ಡಿಸಿಸಿ ಬ್ಯಾಂಕ ಅಧ್ಯಕ್ಷ ರಮೇಶ ಕತ್ತಿ, ಹಿರಾಶುಗರ ಚೇಅರಮನ್ ನಿಖಿಲ್ ಕತ್ತಿ, ಬಿಜೆಪಿ ಚಿಕ್ಕೋಡಿ ಜಿಲ್ಲಾಧ್ಯಕ್ಷ ರಾಜೇಂದ್ರ ನೇರ್ಲಿ ಆಗಮಿಸಲಿದ್ದಾರೆ.

ದಿ.೧೮ರಂದು ಸಾ.೭ಗಂಟೆಗೆ ಬೆಳ್ಳಿರಥೋತ್ಸವ, ಮಹಾಶಿವರಾತ್ರಿ ಶಿವಯೋಗ, ದಿ.೧೯ರಂದು ಮ.೧೨ಗಂಟೆಗೆ ಮಹಾಪ್ರಸಾದ ಮಹೋತ್ಸವ, ರಾತ್ರಿ ೧೦ ಗಂಟೆಗೆ ಪಂಚಮ ಶಿವಲಿಂಗೇಶ್ವರ ರಂಗ ಕಲಾ ಪೋಷಕರ ಸಂಘ ಅಭಿನಯಿಸುವ ರೈತ ಕೊಟ್ಟ ವಚನ ನಾಟಕ ಜರುಗಲಿದೆ. ದಿ.೨೦ರಂದು ಮ.೪ಗಂಟೆಗೆ ಜಂಗೀ ಕುಸ್ತಿ ರಾತ್ರಿ ಜರುಗಲಿದೆ.
ಸಾಮೂಹಿಕ ಗುಗ್ಗುಳೋತ್ಸವ
ಕಳೆದ ವರ್ಷದ ಪದ್ಧತಿಯಂತೆ ಪ್ರಸಕ್ತ ವರ್ಷವೂ ಸುತ್ತಲಿನ ಭಕ್ತ ಸಮುದಾಯಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಜಗದ್ಗರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಾರ್ಗದರ್ಶನದಂತೆ ದಿ.೧೨ರಂದು ಮುಂ.೮.೩೦ ಗಂಟೆಗೆ ಸಾಮೂಹಿಕ ಗುಗ್ಗುಳೋತ್ಸವ ಆಯೋಜಿಸಲಾಗಿದ್ದು, ಆಸಕ್ತ ಭಕ್ತಾದಿಗಳು ಶ್ರೀಮಠದ ಕಾರ್ಯಾಲಯ ಅಥವಾ ಮಲ್ಲಯ್ಯ ಕಾಡದೇವರಮಠ ೭೪೦೬೯೫೬೨೧೧ ತಮ್ಮಣ್ಣ ಸೊಲ್ಲಾಪುರಿ ೮೭೬೨೧೫೭೩೧೮ ಸಂಪರ್ಕಿಸಬಹುದಾಗಿದೆ.

*ಕೃತಕ ಗರ್ಭಧಾರಣೆಯ ವೆಚ್ಚ ರೂ.5 ಸಾವಿರದಿಂದ ರೂ.70 ಸಾವಿರ ಮಾತ್ರ; ಸಚಿವೆ ಶಶಿಕಲಾ ಜೊಲ್ಲೆ*

https://pragati.taskdun.com/siddhagiri-janani-ivf-centreinaugurationshashikala-jolle/

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button