
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯ ಎಸ್ ಜಿ ವಿ ಮಹೇಶ ಪದವಿ ಪೂರ್ವ ಕಾಲೇಜು ದ್ವಿತೀಯ ಪಿಯುಸಿಯ ಫಲಿತಾಂಶ ಘೋಷಣೆಯಾಗಿದ್ದು, ಕಾಲೇಜಿನ ಫಲಿತಾಂಶ ಉತ್ತಮ ಫಲಿತಾಂಶ ಬಂದಿದೆ.
ಒಟ್ಟೂ ೩೮೬ ವಿದ್ಯಾರ್ಥಿಗಳಲ್ಲಿ ೩೫೧ ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. ೭೩ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ, ೨೨೮ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಮತ್ತು ೪೫ ವಿದ್ಯಾರ್ಥಿಗಳು ದ್ವೀತಿಯ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಒಟ್ಟೂ ಗಣಿತದಲ್ಲಿ ೬ ವಿದ್ಯಾರ್ಥಿಗಳು, ಜೀವಶಾಸ್ತ್ರದಲ್ಲಿ ೦೧, ಗಣಕಶಾಸ್ತ್ರದಲ್ಲಿ ೨ ವಿದ್ಯಾರ್ಥಿಗಳು ೧೦೦ಕ್ಕೆ ೧೦೦ ಅಂಕಗಳನ್ನು ಪಡೆದಿದ್ದಾರೆ. ನ್ಯಾಶ್ ಡಿಸೋಜ ಶೇ.೯೬ , ಕುಮಾರಿ ಕಾವ್ಯಾ ತಿಗಡಿ ಶೇ.೯೫.೫೦, ಶ್ರೇಯಾ ಮಗದುಮ್ ಶೇ ೯೫.೧೬ ರಷ್ಟು ಅಂಕಗಳಿಸಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜಿನ ಆಡಳಿತ ಮಂಡಳಿ ಮತ್ತು ಕಾಲೇಜಿನ ಪ್ರಾಚಾರ್ಯ ಎಂ ವಿ ಭಟ್ಟ, ಉಪಪ್ರಾಚಾರ್ಯ ಆನಂದ ಖೋತ್ ಹಾಗೂ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಶುಭ ಹಾರೈಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ