*ಮಹೇಶ್ ಫೌಂಡೇಶನ್ ಗೆ 5 ಎಕರೆ ಭೂಮಿ, 10 ಲಕ್ಷ ರೂ. ನೀಡುತ್ತೇನೆ: ಸಚಿವ ಸತೀಶ್ ಜಾರಕಿಹೊಳಿ*
ಪ್ರಗತಿವಾಹಿನಿ ಸುದ್ದಿ: ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಮಹೇಶ್ ಫೌಂಡೇಶನ್ ಕಾರ್ಯ ಶ್ಲಾಘನೀಯ. ಮಹೇಶ್ ಫೌಂಡೇಶನ್ ಗೆ ಯಮಕನಮರಡಿ ಕ್ಷೇತ್ರದಲ್ಲಿ 5 ಎಕರೆ ಭೂಮಿ ನೀಡಿ, ಕಟ್ಟಡವನ್ನು ನಾನೇ ಕಟ್ಟಿಸಿ ಕೊಡುತ್ತೇನೆ, ವರ್ಷಕ್ಕೆ 10 ಲಕ್ಷ ರೂಪಾಯಿಯನ್ನು ಸಿ.ಎಸ್. ಆರ್ ಪಂಡ್ ನಿಂದ ನೀಡುತ್ತೇನೆಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಬೆಳಗಾವಿ ಸಮೀಪ ಇರುವ ಕಣಬರ್ಗಿಯಲ್ಲಿನ ಮಹೇಶ ಫೌಂಡೇಶನ್‌ನ ಉತ್ಕರ್ಷ ಶಾಲೆ ಮತ್ತು ಮೈಬ್ಲಡ್ ಚಾರಿಟೇಬಲ್ ಬ್ಲಡ್ ಬ್ಯಾಂಕ್ ನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹೇಶ್ ಫೌಂಡೇಶನ್ ಕಾರ್ಯದ ಬಗ್ಗೆ ಅನೇಕರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮಕ್ಕಳಾದ ರಾಹುಲ್ ಮತ್ತು ಪ್ರಿಯಂಕಾ ನಿಮ್ಮ ಫೌಂಡೇಶನ್ ಗೆ ಭೇಟಿ ನೀಡಿದ್ದಾರೆ. ನಾನು ಭೇಟಿ ನೀಡಿದ್ದು ಸಂತಸ ತಂದಿದೆ ಎಂದರು.
ಯಮಕನಮರಡಿ ಕ್ಷೇತ್ರದಲ್ಲಿ 5 ಎಕರೆ ಭೂಮಿ ನೀಡಿ, ಕಟ್ಟಡ ನಾನೇ ಕಟ್ಟಿಸಿ ಕೊಡುತ್ತೇನೆ, ಅಲ್ಲಿಯ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರಕಿರೆ ನಾವು ಮಾಡಿದ ಕಾರ್ಯ ಸ್ವಾರ್ಥಕವಾಗುತ್ತದೆ ಎಂದು ತಿಳಿಸಿದ ಅವರು, ಕಳೆದ 15 ವರ್ಷಗಳಿಂದ, ಮಹೇಶ ಫೌಂಡೇಶನ್ ಸೌಲಭ್ಯ ವಂಚಿತ ಮಕ್ಕಳಿಗೆ ಬೆಂಬಲ ನೀಡುತ್ತಿದೆ. ಉತ್ಕರ್ಷ ಶಾಲೆಯನ್ನು ಸ್ಥಾಪಿಸಿ HIV ಪೀಡಿತ ಮತ್ತು ಸೌಲಭ್ಯ ವಂಚಿತ ಮಕ್ಕಳ ವಿಶೇಷ ಶಾಲೆಯಾಗಿದೆ. ಇದರೊಂದಿಗೆ ಮಹೇಶ ಫೌಂಡೇಶನ್ ಮೈಬ್ಲಡ್ ಚಾರಿಟೇಬಲ್ ಬ್ಲಡ್ ಬ್ಯಾಂಕ್ ಅನ್ನು ಸ್ಥಾಪಿಸಿದ್ದು, ಅಗತ್ಯವಿರುವವರಿಗೆ ಸಮಯಕ್ಕೆ ರಕ್ತವನ್ನು ಪೂರೈಸುವ ಗುರಿಯನ್ನು ಹೊಂದಿದೆ. ಇಂತಹ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಮಹೇಶ್ ಫೌಂಡೇಶನ್ ಕಾರ್ಯ ಶ್ಲಾಘನೀಯ, ಅವರಿಗೆ ನಮ್ಮಿಂದ ಎಲ್ಲ ರೀತಿಯ ಸಹಾಯ, ಸಹಕಾರ ನೀಡುತ್ತೇನೆಂದು ಇದೇ ವೇಳೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಶಾಸಕ ಆಸೀಫ್ (ರಾಜು) ಸೇಠ್, ಮಹೇಶ್ ಫೌಂಡೇಶನ್ ಸಂಸ್ಥಾಪಕ ಮಹೇಶ್, ಮಹೇಶ್ ಫೌಂಡೇಶನ್ ಸಿಬ್ಬಂದಿ, ಮಕ್ಕಳು, ಪಾಲಕರು, ಶಿಕ್ಷಕರು, ಸ್ವಯಂ ಸೇವಕರು ಉಪಸ್ಥಿತರಿದ್ದರು.
ṣ
ಬೆಳಗಾವಿ: ಸಾಮಾಜಿಕ ಸೇವೆ ಸಲ್ಲಿಸುತ್ತಿರುವ ಮಹೇಶ್ ಫೌಂಡೇಶನ್ ಕಾರ್ಯ ಶ್ಲಾಘನೀಯ. ಮಹೇಶ್ ಫೌಂಡೇಶನ್ ಗೆ ಯಮಕನಮರಡಿ ಕ್ಷೇತ್ರದಲ್ಲಿ 5 ಎಕರೆ ಭೂಮಿ ನೀಡಿ, ಕಟ್ಟಡವನ್ನು ನಾನೇ ಕಟ್ಟಿಸಿ ಕೊಡುತ್ತೇನೆ, ವರ್ಷಕ್ಕೆ 10 ಲಕ್ಷ ರೂಪಾಯಿಯನ್ನು ಸಿ.ಎಸ್. ಆರ್ ಪಂಡ್ ನಿಂದ ನೀಡುತ್ತೇನೆಂದು ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಬೆಳಗಾವಿ ಸಮೀಪ ಇರುವ ಕಣಬರ್ಗಿಯಲ್ಲಿನ ಮಹೇಶ ಫೌಂಡೇಶನ್‌ನ ಉತ್ಕರ್ಷ ಶಾಲೆ ಮತ್ತು ಮೈಬ್ಲಡ್ ಚಾರಿಟೇಬಲ್ ಬ್ಲಡ್ ಬ್ಯಾಂಕ್ ನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹೇಶ್ ಫೌಂಡೇಶನ್ ಕಾರ್ಯದ ಬಗ್ಗೆ ಅನೇಕರು ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸಿದ್ದು, ಮಕ್ಕಳಾದ ರಾಹುಲ್ ಮತ್ತು ಪ್ರಿಯಂಕಾ ನಿಮ್ಮ ಫೌಂಡೇಶನ್ ಗೆ ಭೇಟಿ ನೀಡಿದ್ದಾರೆ. ನಾನು ಭೇಟಿ ನೀಡಿದ್ದು ಸಂತಸ ತಂದಿದೆ ಎಂದರು.
ಯಮಕನಮರಡಿ ಕ್ಷೇತ್ರದಲ್ಲಿ 5 ಎಕರೆ ಭೂಮಿ ನೀಡಿ, ಕಟ್ಟಡ ನಾನೇ ಕಟ್ಟಿಸಿ ಕೊಡುತ್ತೇನೆ, ಅಲ್ಲಿಯ ಮಕ್ಕಳಿಗೆ ಒಳ್ಳೆಯ ಶಿಕ್ಷಣ ದೊರಕಿರೆ ನಾವು ಮಾಡಿದ ಕಾರ್ಯ ಸ್ವಾರ್ಥಕವಾಗುತ್ತದೆ ಎಂದು ತಿಳಿಸಿದ ಅವರು, ಕಳೆದ 15 ವರ್ಷಗಳಿಂದ, ಮಹೇಶ ಫೌಂಡೇಶನ್ ಸೌಲಭ್ಯ ವಂಚಿತ ಮಕ್ಕಳಿಗೆ ಬೆಂಬಲ ನೀಡುತ್ತಿದೆ. ಉತ್ಕರ್ಷ ಶಾಲೆಯನ್ನು ಸ್ಥಾಪಿಸಿ HIV ಪೀಡಿತ ಮತ್ತು ಸೌಲಭ್ಯ ವಂಚಿತ ಮಕ್ಕಳ ವಿಶೇಷ ಶಾಲೆಯಾಗಿದೆ. ಇದರೊಂದಿಗೆ ಮಹೇಶ ಫೌಂಡೇಶನ್ ಮೈಬ್ಲಡ್ ಚಾರಿಟೇಬಲ್ ಬ್ಲಡ್ ಬ್ಯಾಂಕ್ ಅನ್ನು ಸ್ಥಾಪಿಸಿದ್ದು, ಅಗತ್ಯವಿರುವವರಿಗೆ ಸಮಯಕ್ಕೆ ರಕ್ತವನ್ನು ಪೂರೈಸುವ ಗುರಿಯನ್ನು ಹೊಂದಿದೆ. ಇಂತಹ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿರುವ ಮಹೇಶ್ ಫೌಂಡೇಶನ್ ಕಾರ್ಯ ಶ್ಲಾಘನೀಯ, ಅವರಿಗೆ ನಮ್ಮಿಂದ ಎಲ್ಲ ರೀತಿಯ ಸಹಾಯ, ಸಹಕಾರ ನೀಡುತ್ತೇನೆಂದು ಇದೇ ವೇಳೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬೆಳಗಾವಿ ಉತ್ತರ ಶಾಸಕ ಆಸೀಫ್ (ರಾಜು) ಸೇಠ್, ಮಹೇಶ್ ಫೌಂಡೇಶನ್ ಸಂಸ್ಥಾಪಕ ಮಹೇಶ್, ಮಹೇಶ್ ಫೌಂಡೇಶನ್ ಸಿಬ್ಬಂದಿ, ಮಕ್ಕಳು, ಪಾಲಕರು, ಶಿಕ್ಷಕರು, ಸ್ವಯಂ ಸೇವಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ