
ಪ್ರಗತಿ ವಾಹಿನಿ ಸುದ್ದಿ ಮುಂಬೈ –
ಖ್ಯಾತ ನಟಿ ಮತ್ತು ಮಡೆಲ್ ಮಲೈಕಾ ಅರೋರಾ ಕಾರ್ ಅಪಘಾತದಲ್ಲಿ ಗಾಯಗೊಂಡಿದ್ದು ಅವರನ್ನು ಮುಂಬೈನ ಅಪೋಲೊ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಮುಂಬೈ ಪುಣೆ ಎಕ್ಸ್ ಪ್ರೆಸ್ ಹೈವೆಯಲ್ಲಿ ಅಪಘಾತ ಸಂಭವಿಸಿದೆ. ೩೮ನೇ ಮೈಲಿಕಲ್ಲು ಬಳಿ ಮೂರು ಕಾರುಗಳು ಪರಸ್ಪರ ಡಿಕ್ಕಿಯಾಗಿದ್ದು ಮಲೈಕಾ ಅರೋರಾ ಪ್ರಯಾಣಿಸುತ್ತಿದ್ದ ಕಾರ್ ಇವುಗಳಲ್ಲಿ ಒಂದಾಗಿತ್ತು. ಮಲೈಕಾ ಅವರ ಕಣ್ಣಿನ ಭಾಗದಲ್ಲಿ ಗಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಅಪಘಾತ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ವಾಹನಗಳನ್ನು ಕೂಡಲೇ ತೆರವುಗೊಳಿಸಲಾಯಿತು. ಎಲ್ಲರಿಗೂ ಅಲ್ಪ ಪ್ರಮಾಣದ ಗಾಯವಾಗಿದೆ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಶಿರಿಶ್ ಪವಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅನ್ಯಗ್ರಹ ಜೀವಿಗಳ ಜೊತೆ ಸಂವಹನಕ್ಕೆ ನಾಸಾ ಪ್ರಯತ್ನ; ವಿಶ್ವದಾದ್ಯಂತ ತೀವ್ರ ಕುತೂಹಲ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ