Belagavi NewsBelgaum NewsKannada NewsKarnataka News

*ಆಟೋಮೊಬೈಲ್ಸ್ ಅಂಗಡಿಯಲ್ಲಿ‌ ಬೆಂಕಿ*

ಪ್ರಗತಿವಾಹಿನಿ ಸುದ್ದಿ: : ಆಟೋಮೊಬೈಲ್ಸ್ ಅಂಗಡಿಯಲ್ಲಿ ನಿನ್ನೆ ತಡರಾತ್ರಿ ಅಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಪ್ರಮಾಣದ ವಸ್ತುಗಳು ಸುಟ್ಟು ನಾಶವಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.

ಅಥಣಿ ಪಟ್ಟಣದ ನಿವಾಸಿ ಬಸವರಾಜ ಎಂಬುವವರಿಗೆ ಸೇರಿದ ಅಟೋಮೋಬೈಲ್ಸ್‌ ಅಂಗಡಿಯಲ್ಲಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಾಹನಗಳು, ವಾಹನಗಳ ಬಿಡಿಭಾಗ ಸೇರಿದಂತೆ ಎಲ್ಲ ವಸ್ತುಗಳು ಬೆಂಕಿಯ ಕೆನ್ನಾಲಿಗೆಗೆ ಸುಟ್ಟು ಕರಕಲಾಗಿವೆ. ಬೆಂಕಿ ಕಾಣಿಸಿಕೊಂಡ‌ ಕ್ಷಣವೇ ಸ್ಥಳಕ್ಕೆ ಅಥಣಿ ಅಗ್ನಿಶಾಮಕದಳ‌ ಇಲಾಖೆಯವರು ಬಂದು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ‌ ನಂದಿಸಿದರು. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯಗಳು‌ ನಡೆದಿಲ್ಲ. ಅಥಣಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಜರುಗಿದೆ.

Home add -Advt

Related Articles

Back to top button