*ಬಸ್ ತಂಗುದಾಣಗಳ ಸದುಪಯೋಗ ಪಡೆದುಕೊಳ್ಳಿ: ಈರಣ್ಣ ಕಡಾಡಿ*

ಪ್ರಗತಿವಾಹಿನಿ ಸುದ್ದಿ: ನಮ್ಮ ಗ್ರಾಮೀಣ ಭಾಗದ ರೈತರು ಮತ್ತು ಕೂಲಿಕಾರರು ತಾಲೂಕಾ ಕೇಂದ್ರಗಳಿಗೆ ಹೊಗಿ ಬರಲು ಬಸ್‌ಗಾಗಿ ದಾರಿ ಕಾಯುವ ಪ್ರಯಾಣಿಕರಿಗೆ ಬಿಸಿಲು, ಮಳೆಯಿಂದ ರಕ್ಷಣೆ ಪಡೆಯಲು ಹಾಗೂ ಕುಳಿತು ವಿಶ್ರಮಿಸಲು ಅನುಕೂಲವಾಗಲಿ ಎಂಬ ಉದ್ದೇಶದಿಂದ ಬಸ್ ಪ್ರಯಾಣಿಕರ ತಂಗುದಾಣ ನಿರ್ಮಾಣ ಮಾಡಲಾಗಿದೆ ಗ್ರಾಮಸ್ಥರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರು ಕರೆ ನೀಡಿದರು.
ರವಿವಾರ ನ-02 ರಂದು ಅರಭಾವಿ ವಿಧಾನಸಭಾ ಮತಕ್ಷೇತ್ರದ ಕಳ್ಳಿಗುದ್ದಿ, ಮನ್ನಿಕೇರಿ, ಬಗರನಾಳ, ಗೋಸಬಾಳ ಗ್ರಾಮಗಳಲ್ಲಿ ರಾಜ್ಯಸಭಾ ಸಂಸದರ ಸ್ಥಳಿಯ ಪ್ರದೇಶಾಭಿವೃದ್ಧಿ ಯೋಜನೆ ಅನುದಾನದಲ್ಲಿ ನಿರ್ಮಾಣಗೊಂಡ ಬಸ್ ಪ್ರಯಾಣಿಕರ ತಂಗುದಾಣಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮದ ಜನರ ಬೇಡಿಕೆಗೆ ಸ್ಪಂದಿಸಿ ಬಸ್ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿದ್ದು, ಗ್ರಾಮದ ಜನರೇ ಈ ತಂಗುದಾಣದ ಸ್ವಚ್ಛತೆಯನ್ನು ಕಾಪಾಡಿ, ಯೋಗ್ಯವಾಗಿ ಉಪಯೋಸಿಕೊಂಡು ಸಂರಕ್ಷಣೆ ಮಾಡಿಕೊಳ್ಳಬೇಕು. ಸುತ್ತಮುತ್ತಲಿನ ಗ್ರಾಮದ ಪ್ರಯಾಣಿಕರು ಹಾಗೂ ಶಾಲೆ ಮಕ್ಕಳಿಗೆ ಇದು ಆಶ್ರಯವಾಗಲಿದೆ ಎಂದರು.
ಸಂಸದರ ಅನುದಾನದಲ್ಲಿ ಈಗಾಗಲೇ ಶಿಕ್ಷಣ ಕ್ಷೇತ್ರದಲ್ಲಿ ಸ್ಮಾರ್ಟ್ ಕ್ಲಾಸ್, ಆರೋಗ್ಯ ಕ್ಷೇತ್ರದಲ್ಲಿ, ಜಿಮ್, ಆಂಬುಲೆನ್ಸ್, ಸಾಂಸ್ಕೃತಿಕ ಕ್ಷೇತ್ರದಲ್ಲಿ ಸಮುದಾಯ ಭವನ, ಸಂಗೀತ ಕ್ಷೇತ್ರದಲ್ಲಿ ರಂಗ ಮಂದಿರ, ಪ್ರಯಾಣಿಕರಿಗೆ ಬಸ್ ತಂಗುದಾಣ ಹೀಗೆ ಹಲವಾರು ರೀತಿಯ ಕೆಲಸಗಳನ್ನು ಒದಗಿಸಿ ಕೊಡುವ ಮೂಲಕ ತಾಲೂಕಿನ ಎಲ್ಲ ಗ್ರಾಮಗಳಿಗೂ ಅನುದಾನವನ್ನು ನೀಡುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಸಾರ್ವಜನಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ಈ ಸಂದರ್ಭದಲ್ಲಿ ಕಳ್ಳಿಗುದ್ದಿ ಗ್ರಾಮದ ಪ್ರಮುಖರಾದ ಎಲ್. ಆರ್. ಕಮಲದಿನ್ನಿ, ಎಲ್. ಆರ್. ಸಂತ್ರಿ, ಲಕ್ಷ್ಮಣ ಹಿರಡ್ಡಿ, ಹನುಮಂತ ಹಿರಡ್ಡಿ, ಗ್ರಾ.ಪಂ ಅಧ್ಯಕ್ಷ ಲಕ್ಷ್ಮಣ ಚನ್ನಾಳ, ಭೀಮಶೆಪ್ಪ ಸಿಂತ್ರಿ, ಸಿದ್ದಪ್ಪ ಬಿಸಗುಪ್ಪಿ, ಶೇಖರ ಮೂಡಲಗಿ ಮನ್ನಿಕೇರಿ ಗ್ರಾಮದ ಬಸವರಾಜ ಅಂಗಡಿ, ಯಲ್ಲಪ್ಪ ನಾಯ್ಕರ, ಮಹಾಂತೇಶ ದಳವಾಯಿ, ಮುತ್ತೆಪ್ಪ ನಾಂವಿ, ವಿಠ್ಠಲ ನಾಯ್ಕರ, ಸುರೇಶ ದಳವಾಯಿ, ಬಗರನಾಳ ಗ್ರಾಮದ ಬಸಪ್ಪ ಗೌಡರ, ಮಹಾದೇವ ತೋಟಗಿ, ಭೀಮಗೌಡ ಇಳಿಗೇರ, ಮಾರುತಿ ಹೊಸಮನಿ, ಚಿದಾನಂದ ವಿಭೂತಿ, ಗೋಸಬಾಳ ಗ್ರಾಮದ ಮಾರುತಿ ಸುಳನ್ನವರ, ಗಂಗಯ್ಯ ಹಿರೇಮಠ, ಪುಂಡಲಿಕ ಬೆಣ್ಣಿ, ಪ್ರಕಾಶ ಪಾಟೀಲ, ಕಲ್ಲಪ್ಪ ಸನದಿ, ಈರಪ್ಪ ಹೊಸಟ್ಟಿ, ಮಂಜು ಬುಳ್ಳಿ, ಶ್ರೀಕಾಂತ ಹಿರೇಮಠ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.




