Kannada NewsKarnataka NewsLatest

ಸವದತ್ತಿಯನ್ನು ಪ್ಲ್ಯಾಸ್ಟಿಕ್ ಮುಕ್ತ ಕ್ಷೇತ್ರವಾಗಿಸಿ -ಸುಭಾಷ್ ಆಡಿ

ಪ್ರಗತಿವಾಹಿನಿ ಸುದ್ದಿ, ಉಗರಗೋಳ(ತಾ.ಸವದತ್ತಿ)– ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಪೀಠದ ರಾಜ್ಯ ಸಮಿತಿ ಅಧ್ಯಕ್ಷ ಸುಭಾಸ ಆಡಿ ಭೇಟಿ ನೀಡಿ,  ಶ್ರೀರೇಣುಕಾ ಯಲ್ಲಮ್ಮ ದೇವಿ ದರ್ಶನ  ಪಡೆದುಕೊಂಡರು.
ದೇವಸ್ಥಾನ ವತಿಯಿಂದ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ, ಸುಭಾಸ ಆಡಿ ಅವರನ್ನು ಶಾಲುಹೊದಿಸಿ ಸತ್ಕರಿಸಿದರು.
ಶ್ರೀಕ್ಷೇತ್ರವು ಕಾಮಧೇನು ಕಲ್ಪವೃಕ್ಷ ಇದ್ದಂತಾ ಪುಣ್ಯ ಕ್ಷೇತ್ರವಾಗಿದ್ದು ದೇಶದ ಮೂಲೆ ಮೂಲೆಗಳಿಂದ ಶ್ರೀರೇಣುಕಾ ಯಲ್ಲಮ್ಮ ದೇವಿಯನ್ನು ಅರಸಿ ಬರುವಂತಾ ಭಕ್ತರು ಶೃದ್ಧೆ, ಭಯ, ಭಕ್ತಿಯಿಂದ ಶ್ರೀದೇವಿಯಲ್ಲಿ ಬೇಡಿಕೊಂಡರೆ ಬೇಡಿದವರಿಗೆ ಬೇಡಿದ್ದನ್ನು ನೀಡುತ್ತಾಳೆ ಎಂದ ಅವರು ನಮ್ಮ ಗ್ರಾಮೀಣ ಜನತೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಭವ್ಯ ಭಾರತ ನಿರ್ಮಿಸುವಲ್ಲಿ ಮುಂದಾಗಬೇಕು ಎಂದರು.
ಶ್ರೀಕ್ಷೇತ್ರವನ್ನು ಪ್ಲಾಸ್ಟಿಕ್ ಮುಕ್ತ ಕ್ಷೇತ್ರವನ್ನಾಗಿ ಮಾಡಲು ಇಲ್ಲಿನ ಅಧಿಕಾರಿಗಳು ಮುಂದಾಗಬೇಕು. ಅಂಗಡಿ ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್ ಕಂಡು ಬಂದರೆ ಅಂತವರಿಗೆ ಮುಲಾಜಿಲ್ಲದೆ ದಂಡ ಹಾಕಿ, ಸಾರ್ವಜನಿಕರಲ್ಲಿ ಹಾಗೂ ಶ್ರೀಕ್ಷೇತ್ರಕ್ಕೆ ಬರುವಂತ ಭಕ್ತರಲ್ಲಿ ಪ್ಲಾಸ್ಟಿಕ್‌ನಿಂದ ಆಗುವ ಪರಿಸರ ಹಾನಿ ಕುರಿತು ಜಾಗೃತ ಮೂಡಿಸಿ, ಸಗಟು ವ್ಯಾಪಾರಸ್ಥರನ್ನು ಬಂಧಿಸಿ ಲಕ್ಷಾಂತರ ರೂ ದಂಡ ಹಾಕಿ ಎಂದರು.

ನಮ್ಮ ಯುವ ಜನತೆಯ ಮುಂದಿನ ಭವಿಷ್ಯದ ಕುರಿತಾಗಿ ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಇನ್ನೂ ಹಲವಾರು ನಗರಗಳಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳನ್ನು ಹಾಕಿ ಉದ್ಯೋಗ ಸೃಷ್ಟಿಸಲು ಮುಂದಾಗಬೇಕು ಎಂದರು. ಸವದತ್ತಿ ಪುರಸಭೆಯ ಅಧಿಕಾರಿ ನಗರದಲ್ಲಿ ಪ್ಲಾಸ್ಟಿಕ್ ನಿಷೇಧವನ್ನು ಕಟ್ಟು ನಿಟ್ಟಾಗಿ ಜಾರಿಗೆ ತರಬೇಕೆಂದು ಹೇಳಿದರು.
ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ, ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಜಿರಗ್ಯಾಳ, ಅಜೀತ ಪಾಟೀಲ, ರಾಜು ಪಾವಟೆ, ಪ್ರಕಾಶ ದೇಶಪಾಂಡೆ, ನಿಂಗನಗೌಡ ಕಾಳಿಂಗೌಡ್ರ, ಅಲ್ಲಮಪ್ರಭು ಪ್ರಭುನವರ, ಸವದತ್ತಿ ಪುರಸಭೆ ಪಿ ಬಿ ಮಠದ, ಎಸ್ ಆಯ್ ಚೌಗಲಾ,ಎಸ್ ಆಯ್ ಕುದರಿ,ತಾಪು ವಾಡೇಕರ,ದೇವಸ್ಥಾನ ಅರ್ಚಕರು, ಸವದತ್ತಿ ಪುರಸಭೆ ಅಧಿಕಾರಿಗಳು ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button