Kannada NewsKarnataka NewsLatest

ಮಲೇರಿಯಾ ಮಾಸಾಚರಣೆ ವಿಡಿಯೋ ಸಂವಾದ : ಸಿಇಓ ಡಾ. ರಾಜೇಂದ್ರ ಕೆ.ವಿ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರ ಅಧ್ಯಕ್ಷತೆಯಲ್ಲಿ ಇಂದು   ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಮಲೇರಿಯಾ ಮಾಸಾಚರಣೆ-೨೦೧೯ರ  ವಿಡಿಯೋ ಕಾನ್ಫರೆನ್ಸ್ ಸಂವಾದವನ್ನು ಆಯೋಜಿಸಲಾಗಿತ್ತು.

ಮಲೇರಿಯಾ ಹಾಗೂ ಇತರೆ ಜ್ವರ ಪ್ರಕರಣಗಳ ನಿಯಂತ್ರಣ ಕ್ರಮಕ್ಕಾಗಿ ತಾಲೂಕಾ ಆರೋಗ್ಯ ಅಧಿಕಾರಿಗಳ ತಂಡವನ್ನು ರಚಿಸಿ ಗ್ರಾಮಗಳಲ್ಲಿ ಎರಡಕ್ಕಿಂತ ಹೆಚ್ಚು ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿಗಳಿಗೆ ವರದಿ ಮಾಡಿ ಪ್ರಕರಣಗಳ ಹಿನ್ನಲೆಯನ್ನು ತಿಳಿದು ಸೂಕ್ತ ಆರೋಗ್ಯ ಶಿಕ್ಷಣವನ್ನು ನೀಡಲು ತಿಳಿಸಿದರು.

ಅಂಗನವಾಡಿ, ಹಾಸ್ಟೇಲ, ಶಾಲಾ-ಕಾಲೇಜುಗಳಲ್ಲಿ ಮಕ್ಕಳು ಜ್ವರದಿಂದ ಗೈರಾದಲ್ಲಿ ತಕ್ಷಣ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ವರದಿ ಮಾಡಲು ಸೂಚಿಸಿದರು.

ಜಿಲ್ಲಾ ಪಂಚಾಯತಿಯಿಂದ ಸ್ವಚ್ಛತಾ ರಥ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅದರಲ್ಲಿ ಮಲೇರಿಯಾ ಕುರಿತು ಮಾಹಿತಿಯನ್ನು ಜಿಂಗಲ್ಸ್ ಮುಖಾಂತರ ಜಾಗೃತಿ ಮೂಡಿಸುವುದು. ಹಾಸ್ಟೇಲು, ಅಂಗನವಾಡಿ, ಶಾಲಾ-ಕಾಲೇಜುಗಳ ಮೇಲ್ಚಾವಣಿಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸುವುದು ಕಿಡಕಿ-ಬಾಗಿಲುಗಳಿಗೆ ಸೊಳ್ಳೆ ಪರದೆಗಳನ್ನು ಅಳವಡಿಸಿಕೊಳ್ಳುವಂತೆ ತಿಳಿಸಿದರು.

ವಲಸೆ ಬಂದವರಲ್ಲಿ ಜ್ವರ ಪ್ರಕರಣಗಳು ಕಂಡು ಬಂದರೆ ಅವರ ರಕ್ತ ಲೇಪನ ಪಡೆದು ಮಲೇರಿಯಾ ಪ್ರಕರಣ ದೃಢಪಟ್ಟರೆ ೨೪ ಗಂಟೆಗಳಲ್ಲಿ ತಕ್ಷಣ ಚಿಕಿತ್ಸೆ ನೀಡುವುದು.

ಗಣಿಕಾರಿಕೆ ಮಾಡುವ ಪ್ರದೇಶಗಳಲ್ಲಿ ತಗ್ಗಿನಲ್ಲಿ ನೀರು ನಿಂತರೆ ಅದನ್ನು ಹೊರಹಾಕುವುದು ಅಥವಾ ಲಾರ್ವಾ ನಾಶಕ ದ್ರಾವಣವನ್ನು ಸಿಂಪಡಿಸುವುದು. ಸ್ಥಳೀಯ ಸಂಸ್ಥೆಯವರು ಪರಿಸರ ಸ್ವಚ್ಛತೆಯನ್ನು ಕಾಪಾಡಿ ಕೊಳ್ಳಲು ಕ್ರಮ ವಹಿಸಬೇಕು. ಧುಮಿಕರಣವನ್ನು ಮನೆಯ ಒಳಾಂಗಣದಲ್ಲಿ ಮಾಡಲು ತಿಳಿಸಿದರು.

ಘನ-ತ್ಯಾಜವನ್ನು  ಸಮಪರ್ಕವಾಗಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳುವುದು. ಪ್ರತಿಯೊಂದು ತಾಲೂಕಿನಲ್ಲಿ ಒಂದು ಲಾರ್ವಾಹಾರಿ(ಗಂಬ್ಯೂಸಿಯಾ) ಮೀನುಗಳ ಸಾಕಾಣಿಕೆಯ ತೊಟ್ಟಿಯನ್ನು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸ್ಥಾಪಿಸುವುದು. ಲಾರ್ವಾಹಾರಿ ಮೀನು ಮರಿಗಳನ್ನ ಮೀನುಗಾರಿಕೆ ಇಲಾಖೆಯವರಿಂದ ಸರಬರಾಜು ಮಾಡಲು ಸೂಚಿಸಿದರು.

ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿಗಳಾದ ಡಾ. ಎಂ.ಎಸ್. ಪಲ್ಲೇದ ಅವರು ಮಲೇರಿಯಾ ಮಾಸಾಚರಣೆ ಹಾಗೂ ರೋಗಗಳ ಬಗ್ಗೆ ಸಂಕ್ಷಿಪ್ತವಾಗಿ ಸಭೆಗೆ ವಿವರಿಸಿದರು.

ಸಭೆಯಲ್ಲಿ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಾದ ಡಾ ಬಿ ಎನ ತುಕ್ಕಾರ, ಆರ ಸಿ ಎಚ ಒ ಡಾ ಐ ಪಿ ಗಡಾದ, ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ.ಸಂಜಯ ಡುಮ್ಮಗೋಳ, ಗ್ರಾಮೀಣ ಅಭಿವೃಧ್ಧಿ ಮತ್ತು ಪಂಚಾಯತರಾಜ್, ನಗರಾಭಿವೃಧ್ದಿ, ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃಧ್ದಿ, ಸಮಾಜ ಕಲ್ಯಾಣ, ಮೀನುಗಾರಿಕೆ, ಕೈಗಾರಿಕೆ, ನೀರಾವರಿ, ಕಂದಾಯ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕು.ಕ ಅಧಿಕಾರಿಗಳಾದ ಡಾ.ಅಪ್ಪಾಸಾಹೆಬ ನರಟ್ಟಿ ಅವರು ಸ್ವಾಗತಿಸಿದರು. ಚಿಕ್ಕೋಡಿ ಅಪರ ಜಿಲ್ಲಾ ಆರೋಗ್ಯ ಮತ್ತು ಕು.ಕ.ಅಧಿಕಾರಿಗಳಾದ ಡಾ.ಎಸ.ವಿ.ಮುನಿಯಾಳ ಅವರು ವಂದಿಸಿದರು.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button