Kannada NewsLatest

ಬಸ್ ಓಡಿಸುತ್ತಿದ್ದಾಗಲೇ ಹೃದಯಾಘಾತದಿಂದ ಡ್ರೈವರ್ ಸಾವು; ಪಲ್ಟಿಯಾದ ಬಸ್

ಪ್ರಗತಿವಾಹಿನಿ ಸುದ್ದಿ; ರಾಯಚೂರು: ಹಬ್ಬದ ದಿನವೇ ದುರಂತವೊಂದು ಸಂಭವಿಸಿದೆ. ಬಸ್ ಓಡಿಸುತ್ತಿದ್ದಾಗಲೇ ಬಸ್ ಚಾಲಕ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಬಸ್ ಪಲ್ಟಿಯಾಗಿ ಬಿದ್ದ ಘಟನೆ ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕಿನ ಚಿಕ್ಕಹೆಸರೂರು ಗ್ರಾಮದಲ್ಲಿ ನಡೆದಿದೆ.

ರಾಯಚೂರಿನಿಂದ ಬೆಳಗಾವಿಗೆ ಹೊರಟಿದ್ದ ರಾಜಹಂಸ ಬಸ್ ಚಿಕ್ಕಹೆಸರೂರು ಬಳಿ ಬರುತ್ತಿದ್ದಂತೆ ಬಸ್ ಚಾಲಕ ಬಸ್ ಓಡಿಸುತ್ತಲೇ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಶ್ರೀನಿವಾಸ್ ಮೃತ ಚಾಲಕ.

Home add -Advt

ಚಾಲಕನ ನಿಯಂತ್ರಣ ಕಳೆದುಕೊಂಡ ಬಸ್ ರಸ್ತೆ ಪಕ್ಕದ ಜಮೀನಿಗೆ ನುಗ್ಗಿ ಪಲ್ಟಿಯಾಗಿದೆ. 14 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ

https://pragati.taskdun.com/politics/reservationordinancegovernor-gives-assent/

Related Articles

Back to top button