Latest

ಲೈಂಗಿಕ ಕಿರುಕುಳ; ನಟ ವಿಜಯ್ ಬಾಬು ಪಾಸ್ ಪೋರ್ಟ್ ಮುಟ್ಟುಗೋಲು

ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಸಹ ನಟಿಗೆ ಲೈಂಗಿಕ ದೌರ್ಜನ್ಯ ನೀಡಿರುವ ಆರೋಪ ಎದುರಿಸುತ್ತಿರುವ ಮಲಯಾಳಂ ನಟ, ನಿರ್ಮಾಪಕ ವಿಜಯ್ ಬಾಬು ಅವರ ಪಾಸ್ ಪೋರ್ಟ್ ನ್ನು ವಿದೇಶಾಂಗ ವ್ಯಹಾರಗಳ ಸಚಿವಾಲಯ ಮುಟ್ಟುಗೋಲು ಹಾಕಿಕೊಂಡಿದೆ.

ಕೊಚ್ಚಿ ಪೊಲೀಸರು ಕೇಂದ್ರಕ್ಕೆ ಸಲ್ಲಿಸಿದ್ದ ಮನವಿ ಮೇರೆಗೆ ವಿಜಯ್ ಬಾಬು ಅವರ ಪಾಸ್ ಪೋರ್ಟ್ ಜಪ್ತಿ ಮಾಡಲಾಗಿದೆ. ಪಾಸ್ ಪೋರ್ಟ್ ಜಪ್ತಿ ಬೆನ್ನಲ್ಲೇ ವಿಜಯ್ ಬಾಬು ವೀಸಾ ಕೂಡ ರದ್ದಾಗಲಿದೆ ಎಂದು ಕೊಚ್ಚಿ ಪೊಲೀಸ್ ಆಯುಕ್ತ ಸಿ.ಹೆಚ್.ನಾಗರಾಜು ತಿಳಿಸಿದ್ದಾರೆ.

ಪಾಸ್ ಪೋರ್ಟ್ ರದ್ದಾಗಿರುವುದರಿಂದ ಯುಎಇ ಪೊಲೀಸರು ವಿಜಯ್ ಬಾಬು ಬಂಧಿಸಿ ಕೇರಳಕ್ಕೆ ಕರೆತರುವ ಸಾಧ್ಯತೆ ಇದೆ. ಆದರೆ ವಿಜಯ್ ಯುಎಇ ಇಂದ ಮತ್ತೊಂದು ದೇಶಕ್ಕೆ ತೆರಳುವ ಬಗ್ಗೆಯೂ ಅನುಮಾನಗಳಿವೆ ಎಂದು ಹೇಳಲಾಗುತ್ತಿದೆ. ಮೇ 24ರೊಳಗೆ ವಿಜಯ್ ಬಾಬು ವಿಚಾರಣೆಗೆ ಹಾಜರಾಗದಿದ್ದರೆ ಅವರ ವಿರುದ್ಧ ರೆಡ್ ಕಾರ್ನರ್ ನೋಟೀಸ್ ಜಾರಿ ಮಾಡಲಾಗುವುದು ಎಂದು ತಿಳಿದುಬಂದಿದೆ.

ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ನಟ ವಿಜಯ್ ಬಾಬು ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ನಟಿಯೊಬ್ಬರು ಎರ್ನಾಕುಲಂ ಪೊಲೀಸರಿಗೆ ದೂರು ನೀಡಿದ್ದರು. ಅಲ್ಲದೇ ಸಾಮಾಜಿಕ ಜಾಲ ತಾಣಗಳಲ್ಲಿ ವಿಜಯ್ ಮಹಿಳೆಯ ಹೆಸರು ಬಹಿರಂಗ ಮಾಡಿದ ಕಾರಣಕ್ಕೆ ವಿಜಯ್ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿತ್ತು.

Home add -Advt

ಮಹಿಳೆಯನ್ನು ಬ್ಲ್ಯಾಕ್ ಮೇಲ್ ಮಾಡಿ ನಿರಂತರ ಅತ್ಯಾಚಾರ

Related Articles

Back to top button