
ಪ್ರಗತಿವಾಹಿನಿ ಸುದ್ದಿ; ತಿರುವನಂತಪುರಂ: ಮಲಯಾಳಂ ಖ್ಯಾತ ನಿರ್ದೇಶಕ ಅಲಿ ಅಕ್ಬರ್ ಹಿಂದೂ ಧರಮಕ್ಕೆ ಮತಾಂತರಗೊಳ್ಳಲು ನಿರ್ಧರಿಸಿದ್ದಾರೆ. ಈ ಕುರಿತು ಸ್ವತ: ಅವರೇ ಮಾಹಿತಿ ನೀಡಿದ್ದಾರೆ.
ನಾನು ಹಾಗೂ ನನ್ನ ಹೆಂಡತಿ ಹಿಂದೂ ಧರ್ಮಕ್ಕೆ ಮತಾಂತರ ಆಗುತ್ತೇವೆ. ಇನ್ಮುಂದೆ ಮುಸ್ಲೀಂರಾಗಿ ಮುಂದುವರೆಯಲ್ಲ ಎಂದು ಹೇಳಿದ್ದಾರೆ.
ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ಸಾವಿನ ಬಗ್ಗೆ ಮುಸ್ಲೀಮರು ಖುಷಿಯ ಎಮೋಜಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದನ್ನು ಅಲಿ ಅಕ್ಬರ್ ತೀವ್ರವಾಗಿ ಖಂಡಿಸಿದ್ದರು. ಮಿಲಿಟರಿ ಅಧಿಕಾರಿ ರಾವತ್ ಸಾವಿಗೆ ಅಗೌರವ ಸೂಚಿಸಿದ್ದರೂ ಮುಸ್ಲೀಂರ ಕೃತ್ಯವನ್ನು ಯಾವ ಮುಸ್ಲೀಂ ನಾಯಕರೂ ಖಂಡಿಸಿಲ್ಲ. ಇದರಿಂದ ಈ ಧರ್ಮದ ಬಗ್ಗೆ ನನಗೆ ನಂಬಿಕೆ ಉಳಿದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ಹುಟ್ಟಿನಿಂದ ನಾನು ಪಡೆದ ಗುರುತನ್ನು ತ್ಯಜಿಸುತ್ತಿದ್ದೇನೆ. ಇಂದಿನಿಂದ ನಾನು ಭಾರತೀಯ, ಭಾರತದ ವಿರುದ್ಧ ನಗುವ ಎಮೋಜಿಗಳನ್ನು ಪೋಸ್ಟ್ ಮಾಡಿದ ಜನರಿಗೆ ಇದೇ ನನ್ನ ಉತ್ತರ ಎಂದು ಫೇಸ್ ಬುಕ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ನೂರ್ ಜಹಾನ್ ಬಂಧನ