Latest

ಕರ್ನಾಟಕದ ‘ಕರ್ಮಯೋಗಿ’ಯಾಗಿ ಮಲ್ಲಿಕಾರ್ಜುನ್ ಖರ್ಗೆ: ವೈರಲ್ ಆಯ್ತು ಸಾಂಗ್

ಪ್ರಗತಿವಾಹಿನಿ ಸುದ್ದಿ, ಕಲ್ಬುರ್ಗಿ: ಮಲ್ಲಿಕಾರ್ಜುನ ಖರ್ಗೆ ಅವರದ್ದು ಕರ್ನಾಟಕದ ರಾಜಕಾರಣದಲ್ಲಿ ದೊಡ್ಡ ಹೆಸರು. ಅವರು 3 ಕಾರಣಗಳಿಗಾಗಿ ಹೆಚ್ಚಿನ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರರಾಗುತ್ತಾರೆ. ಒಂದು, ಪಕ್ಷ ನಿಷ್ಠೆ, ಎರಡು, ಜಾತಿಯನ್ನು ಏಣಿಯಾಗಿಸಿಕೊಳ್ಳದೆ ಎತ್ತರಕ್ಕೇರಿದ್ದು, ಮೂರನೆಯದು, ಕೆಲಸದಲ್ಲಿನ ಅವರ ಬದ್ಧತೆ.

ಮಲ್ಲಿಕಾರ್ಜುನ ಖರ್ಗೆ ಎಂತಹ ಸಂದರ್ಭದಲ್ಲೂ ಪಕ್ಷ ಬದಲಿಸದೆ ಕಾಂಗ್ರೆಸ್ ಗೆ ನಿಷ್ಠರಾಗಿ ಉಳಿದುಕೊಂಡಿರುವುದರಿಂದ ಇಂದು ಅವರಿಗೆ ಎಐಸಿಸಿ ಅಧ್ಯಕ್ಷಸ್ಥಾನ ಒಲಿದು ಬಂದಿದೆ. ಯಾವತ್ತೂ ಪಕ್ಷದ ಕುರಿತು, ಪಕ್ಷದ ನಾಯಕರ ಕುರಿತು ಅಸಮಾಧಾನದ ಮಾತನಾಡಿದವರಲ್ಲ. ಸ್ಥಾನ ಮಾನಕ್ಕಾಗಿ ಎಂದೂ ಡಿಮಾಂಡ್ ಇಟ್ಟವರಲ್ಲ. ಇನ್ನೊಂದು ವಿಶೇಷವೆಂದರೆ, ಯಾರಾದರೂ ದಲಿತ ನಾಯಕ ಎಂದರೆ ಅಥವಾ ದಲಿತರೆನ್ನುವ ಕಾರಣಕ್ಕೆ ಯಾವುದಾದರೂ ಹುದ್ದೆಯನ್ನು ಕೊಡಬೇಕು ಎನ್ನುವ ಹೇಳಿಕೆ ನೀಡಿದರೆ ಖರ್ಗೆ ಉರಿದು ಬೀಳುತ್ತಾರೆ. ನನ್ನನ್ನು ಜಾತಿಗೆ ಸೀಮಿತಗೊಳಿಸಬೇಡಿ. ಜಾತಿ ಆಧಾರಿತ ಖೋಟಾ ಇದ್ದರೆ ನನ್ನನ್ನು ಪರಿಗಣಿಸಲೇಬೇಡಿ ಎಂದು ನೇರವಾಗಿ ಹೇಳುತ್ತಾರೆ. ಇದು ಅವರನ್ನು ಇನ್ನಷ್ಟು ಎತ್ತರದ ಸ್ಥಾನಕ್ಕೆ ಕೊಂಡೊಯ್ಯುತ್ತದೆ.

ಇನ್ನು, ಅವರು ಕ್ಷೇತ್ರದ ಅಭಿವೃದ್ಧಿಯಲ್ಲೂ ಬದ್ಧತೆ ತೋರಿಸುತ್ತಿದ್ದಾರೆ. ತಾವು ಪ್ರತಿನಿಧಿಸುವ ಕ್ಷೇತ್ರದಲ್ಲಿ ಸಾಕಷ್ಟು ಮಾದರಿ ಕೆಲಸಗಳ ಮೂಲಕ ಪ್ರಸಿದ್ಧರಾಗಿದ್ದಾರೆ. ಹಾಗಾಗಿಯೇ ಮತದಾರರು ಮತ್ತೆ ಮತ್ತೆ ಅವರನ್ನು ಆಯ್ಕೆ ಮಾಡುತ್ತ ಬಂದಿದ್ದಾರೆ.

ಕಾಂಗ್ರೆಸ್‌ನ ಹಿರಿಯ ರಾಜಕಾರಣಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಭಿಮಾನಿಗಳು ಕರ್ನಾಟಕ ರಾಜ್ಯಕ್ಕಾಗಿ ಖರ್ಗೆ ಅವರ ಅಚಲ ಬದ್ಧತೆ ಮತ್ತು ಸಾಧನೆಗಳನ್ನು ಬಿಂಭಿಸುವ “ಕರ್ಮಯೋಗಿ ಖರ್ಗೆ” ಎನ್ನುವ ಶೀರ್ಷಿಕೆಯ ಹೃದಯಸ್ಪರ್ಶಿ ಮತ್ತು ಸ್ಪೂರ್ತಿದಾಯಕ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಈ ಹಾಡಿನಲ್ಲಿ ಖರ್ಗೆಯವರ ಜನಪರ ನಿಲುವುಗಳು ಮತ್ತು ಜನರ ಕಲ್ಯಾಣಕ್ಕಾಗಿ ಅವರ ಸಮರ್ಪಣಾ ಮನೋಭಾವವನ್ನು ಎತ್ತಿ ತೋರಿಸಲಾಗಿದೆ.

ನಮ್ಮ ಪ್ರಿಯಾಂಕ ಖರ್ಗೆ ಫೇಸ್ ಬುಕ್ ಪುಟದಲ್ಲಿ ಶೇರ್ ಮಾಡಿರು ವೈರಲ್ ಹಾಡು, ಇಲ್ಲಿ ಕ್ಲಿಕ್ ಮಾಡಿ: https://www.facebook.com/watch/?v=619392509719640

“ದೀನದಲಿತರಾಗಿ ಹುಟ್ಟಿದ ಜೀವ, ಅಭಿವೃದ್ದಿಗೆ ಮುಡಿಪಿಟ್ಟ ಜೀವ, ಇವರಿಂದಲೇ ಮುಂದಡಿ ಇಟ್ಟಿದೆ ಕಲಬುರ್ಗಿ, ಇವರ ಹೋರಾಟ ಇಂದು ನಮಗಾಗಿ” ಎಂದು ಆರಂಭವಾಗುವ ಈ ಹಾಡಿನಲ್ಲಿ ಖರ್ಗೆ ಅವರ ನಾಲ್ಕು ದಶಕಗಳ ಕಾಲದ ಗಮನಾರ್ಹ ರಾಜಕೀಯ ವೃತ್ತಿಜೀವನವನ್ನು ಮತ್ತು ಕರ್ನಾಟಕದ ಅಭಿವೃದ್ಧಿ ಮತ್ತು ಪ್ರಗತಿಗೆ ಅವರ ಹಲವಾರು ಕೊಡುಗೆಗಳನ್ನು ತೋರಿಸಲಾಗಿದೆ. ಖರ್ಗೆ ಅವರ ನಾಯಕತ್ವದ ಗುಣ, ದೂರದೃಷ್ಟಿ ಮತ್ತು ಜನರ ಬಗ್ಗೆ ಅವರಿಗಿರುವ ಸಹಾನುಭೂತಿಯನ್ನು ತೋರಿಸುವ ಜೊತೆಗೆ ತಮ್ಮ ನಿಸ್ವಾರ್ಥ ಸೇವೆಯಿಂದ ಖರ್ಗೆ ‘ಕರ್ಮಯೋಗಿ’ಯಾಗಿದ್ದಾರೆ ಎಂದು ಈ ಹಾಡು ಅವರ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತದೆ. 

ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ, ಸರ್ಕಾರ ಮತ್ತು ಪಕ್ಷದ ವಿವಿಧ ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಸದ್ಯಕ್ಕೆ ಎಐಸಿಸಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಖರ್ಗೆ ಅವರ ಮೇಲೆ ಜನರು ಹೊಂದಿರುವ ಅಪಾರ ಪ್ರೀತಿ ಮತ್ತು ಗೌರವವನ್ನು ಮತ್ತು ರಾಜ್ಯದ ಅಭಿವೃದ್ಧಿಯ ಕಡೆಗೆ ಖರ್ಗೆ ಅವರ ಅಪ್ರತಿಮ ಸಮರ್ಪಣೆಯನ್ನು ಈ ಹಾಡು ಪ್ರತಿಬಿಂಬಿಸುತ್ತದೆ.

‘ಕರ್ಮಯೋಗಿ ಖರ್ಗೆ’ ಶೀರ್ಷಿಕೆಯಡಿಯಲ್ಲಿ ಬಿಡುಗಡೆಯಾದ ಈ ಹಾಡು ಈಗ ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಶೇರ್ ಆಗುತ್ತಿದ್ದು, ಮಲ್ಲಿಕಾರ್ಜುನ ಖರ್ಗೆ ಅವರ ಅಭಿಮಾನಿಗಳು ಕುತೂಹಲದಿಂದ ಎಲ್ಲೆಡೆ ಹಂಚಿಕೊಳ್ಳುತ್ತಿದ್ದಾರೆ ಮತ್ತು ಕರ್ನಾಟಕಕ್ಕೆ ಅವರ ಆದರ್ಶಪ್ರಾಯ ನಾಯಕತ್ವ ಮತ್ತು ಸಾಧನೆಗಳ ಸಂದೇಶವನ್ನು ಹರಡುತ್ತಿದ್ದಾರೆ.

https://www.facebook.com/watch/?v=619392509719640
https://pragati.taskdun.com/vidhanasabha-electioncongress-candidate-listjagadish-shettar/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button