
ಕಣ್ಮುಚ್ಚಿ ಕುಳಿತ ಅಧಿಕಾರಿಗಳು
ಪ್ರಗತಿವಾಹಿನಿ ಸುದ್ದಿ: ಸರಕಾರಿ ಶಾಲೆಗಳ ಉನ್ನತಿಗಾಗಿ ಸರ್ಕಾರ ಧಾರಾಳವಾಗಿ ಹಣ ಖರ್ಚು ಮಾಡಿ ಮೈದಾನ ತಡೆಗೊಡೆ ಹಾಗೂ ಕ್ಷೀರ ಭಾಗ್ಯ, ಬಿಸಿಯೂಟ ಶೂ ಭಾಗ್ಯ ಹೀಗೆ ಅನೇಕ ಭಾಗ್ಯಗಳನ್ನು ಕರುಣಿಸಿ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಉನ್ನತ ಅಧಿಕಾರಿಗಳು ಸರ್ಕಾರ ಸರ್ಕಸ್ ಮಾಡುವಾಗ ಸ್ಥಳೀಯ ಪಂಚಾಯತಿ ಅಧಿಕಾರಿಗಳ ನಿರ್ಲಕ್ಷತನ ಹಾಗೂ ಅಸಡ್ಡೆಗೆ ಶಾಲಾ ಆವರಣ ಕೆರೆಯಂತಾಗಿ ಮಕ್ಕಳ ಕಲಿಕೆಗೆ ಅಡ್ಡಯಾಗಿದೆ.

ಬೈಲಹೊಂಗಲ ಮತಕ್ಷೇತ್ರದ ಸವದತ್ತಿ ತಾಲೂಕಿನ ಮಲ್ಲೂರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಮೈದಾನ ಉತ್ತರಿ ಮಳೆಯಲ್ಲಿ ಸಂಪೂರ್ಣವಾಗಿ ಕೆರೆಯಂತಾಗಿದೆ. ಮೈದಾನದಲ್ಲಿ ನೀರು ಸಂಗ್ರಹವಾಗಿದ್ದು ಜಲಾವೃತಗೊಂಡಿದೆ.
ಈ ಬಗ್ಗೆ ಸ್ಥಳೀಯ ಗ್ರಾಮ ಪಂಚಾಯತಿ ಪಿಡಿಓಗೆ ಹತ್ತು ಹಲವಾರು ಬಾರಿ ಗಮನಕ್ಕೆ ತಂದರು ಶಾಲಾ ಮೈದಾನದ ನೀರು ಹೊರತಗೆಯಲಿಕ್ಕೆ ಗಟಾರಿ ವ್ಯವಸ್ಥೆ ಮಾಡುತ್ತಿಲ್ಲ ಎಂದು ಪಾಲಕರ ಆಪಾದನೆಯಾಗಿದೆ. ಮಳೆ ಬಂದರೆ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ. ಅಂತಹ ಸ್ಥಿತಿ ನಿರ್ಮಾಣವಾಗಿದೆ. ಎಲ್ಲಿ ಯಾವ ಅನಾಹುತವಾಗುತ್ತೋ ಎಂಬ ಆತಂಕದಲ್ಲೇ ಮಕ್ಕಳನ್ನು ಶಾಲೆಗೆ ಕಳುಹಿಸುವ ಪರಿಸ್ಥಿತಿ ಪೋಷಕರದ್ದು.

ಸರ್ಕಾರಿ ಶಾಲೆಯ ಆವರಣದಲ್ಲಿ ನೀರು ನಿಂತು ಅವಾಂತರ ಸೃಷ್ಟಿಯಾದರೂ ಅಧಿಕಾರಿಗಳು ಮಾತ್ರ ಎಚ್ಚತ್ತುಕೊಳ್ಳದೇ ಬೇಜವಾಬ್ದಾರಿ ಮೆರೆದಿದ್ದಾರೆ. ಗ್ರಾಮ ಪಂಚಾಯತಿ ಅಧಿಕಾರಿಗಳ ಹಾಗೂ ಶಿಕ್ಷಣ ಅಧಿಕಾರಿಗಳ ದಿವ್ಯ ನಿರ್ಲಕ್ಷಕ್ಕೆ ಮಕ್ಕಳ ಪೋಷಕರು ಹಿಡಿ ಶಾಪ ಹಾಕುತ್ತಿದ್ದು, ಮಕ್ಕಳ ಭವಿಷ್ಯದ ಜೋತೆ ಆಟವಾಡುವ ಅಧಿಕಾರಿಗಳ ವಿರುದ್ಧ ಕ್ರಮ ತಗೆದುಕೊಳ್ಳಬೇಕು. ಇನ್ನಾದರೂ ಶಾಲಾ ಆವರಣದಲ್ಲಿ ನಿಂತಿರುವ ನೀರನ್ನು ಹೊರತೆಗೆಯಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ