Belagavi NewsBelgaum NewsKannada NewsKarnataka NewsNational
*ಬೆಳಗಾವಿಯಲ್ಲಿ ಆನೆ ತುಳಿತಕ್ಕೆ ಸಿಲುಕಿ ಮಾವುತ ಸಾವು*
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಆನೆ ತುಳಿತಕ್ಕೆ ಸಿಲುಕಿ ಮಾವುತ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಅಲಖನೂರ ಗ್ರಾಮದಲ್ಲಿ ನಡೆದಿದೆ.
ರಾಯಬಾಗ ತಾಲೂಕಿನ ಅಲಖನೂರ ಕರಿಸಿದ್ದೇಶ್ವರ ದೇವಸ್ಥಾನದ ಧೃವ ಎಂಬ ಆನೆಯಿಂದ ಮಾವುತನ ಸಾವನ್ನಪ್ಪಿದ್ದಾನೆ. ಅಲಖನೂರ ಗ್ರಾಮದ ಧರೆಪ್ಪ ಭೇವನೂರ (32) ಮೃತ ದುರ್ದೈವಿ.
ನಿನ್ನೆ ರಾತ್ರಿ ಧೃವ ಆನೆಗೆ ಮಧ ಬಂದಹಾಗೆ ಆಗಿತ್ತು. ಇಂದು ಬೆಳಿಗ್ಗೆ ಮತ್ತೆ ಮಧ ಬಂದ ಹಿನ್ನೆಲೆಯಲ್ಲಿ ಆನೆಗೆ ಮೇವು ಹಾಕಲು ಹೋದಾಗ ಆನೆ ಮಾವುತನ ಮೇಲೆ ದಾಳಿ ಮಾಡಿದೆ. 21 ವರ್ಷದ ಗಂಡಾನೆ ಧೃವ ಕಾಲುತುಳಿತದಿಂದ ಮಾವುತ ಸಾವನ್ನಪ್ಪಿದ್ದಾರೆ.
ಮೃತ ಧರೆಪ್ಪ ಭೇವನೂರಗೆ ಕಳೆದ 10 ದಿನದ ಹಿಂದೆ ಗಂಡು ಮಗು ಜನಿಸಿದೆ. ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಾರುಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ