Belagavi NewsBelgaum NewsCrimeKannada NewsKarnataka NewsNational
*ಮಾರಕಾಸ್ತ್ರ ಹೊಂದಿದ ವ್ಯಕ್ತಿಯ ಬಂಧನ: ಹರಿತವಾದ ಆಯುಧ ಜಪ್ತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಸ್ಟ್ರಾಚಿಂಗ್ ಪ್ರಕರಣಗಳು ಹೆಚ್ಚಾಗುತ್ತಿದ್ದುದ್ದರಿಂದ ಶಾಂತಿ ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಸಂಶಯಾಸ್ಪದ ವ್ಯಕ್ತಿಗಳನ್ನು ಪರಿಶೀಲನೆ ಮಾಡುತ್ತಿರುವಾಗ ಬೆಳಗಾವಿ ಅಶೋಕ ನಗರದ ಹೈವೆ ಅಂಡರ್ ಪಾಸ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಆಯುಧ ಹೊಂದಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಪಾರುಖ ರೆಹಮಾನ ಚಜ್ಜು (35) ಬಂಧಿತ ವ್ಯಕ್ತಿ. ಸಾರ್ವಜನಿಕರಲ್ಲಿ ಭಯಹುಟ್ಟಿಸುವುದಕ್ಕಾಗಿ ಇನ್ಯಾವುದೋ ಕೃತ್ಯದಲ್ಲಿ ಭಾಗಿಯಾಗುವ ಉದ್ದೇಶದಿಂದ ಇಟ್ಟಿದ್ದ ಹರಿತವಾದ ಅಪಾಯಕಾರಿ ತಲವಾರವನ್ನು ಜಳಪಿಸುತ್ತಾ ತಿರುಗುತ್ತಿದ್ದಾಗ ಆಯುಧವನ್ನು ಜಪ್ತಪಡಿಸಿಕೊಳ್ಳಲಾಗಿದೆ.
ಆರೋಪಿ ವಿರುದ್ಧ ಮಾಳಮಾರುತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಿ, ಪ್ರಕರಣದ ತನಿಖೆ ಮುಂದುವರೆಸಲಾಗಿದೆ.




