Belagavi NewsBelgaum NewsKarnataka News

*ಸವದತ್ತಿ ರೇಣುಕಾ ಯಲ್ಲಮ್ಮ ಗುಡ್ಡಕ್ಕೆ ಈ ದಿನಗಳಂದು ವಿಶೇಷ ಬಸ್ ವ್ಯವಸ್ಥೆ*

ಪ್ರಗತಿವಾಹಿನಿ ಸುದ್ದಿ: ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮ ಗುಡ್ಡಕ್ಕೆ ಹುಬ್ಬಳ್ಳಿಯಿಂದ ವಾರದಲ್ಲಿ ಎರಡು ದಿನಗಳ ಕಾಲ ವಿಶೇಷ ನೇರ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಬಗ್ಗೆ ವಾಯುವ್ಯ ಕರ್ನಾಟಕ ರಸ್ತೆಸಾರಿಗೆ ವಿಭಗದ ನಿಯತ್ರಣಾಧಿಕಾರಿ ರಾಮನಗೌಡರ ಮಾಹಿತಿ ನೀಡಿದ್ದು, ಭಕ್ತರ ಕೋರಿಕ್ರೆ ಮೇರೆಗೆ ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಛಟ್ಟಿ ಅಮವಾಸ್ಯೆವರೆಗೆ ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದಿಂದ ಸವದತ್ತಿಯ ಯಲ್ಲಮ್ಮ ಗುಡ್ಡಕ್ಕೆ ವಿಶೇಷ ಬಸ್ ಕಲ್ಪಿಸಲಾಗಿದೆ.

Home add -Advt

ಛಟ್ಟಿ ಅಮವಾಸ್ಯೆವರೆಗೆ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಹುಬ್ಬಳ್ಳಿಯಿಂದ ಯಲ್ಲಮ್ಮನ ಗುಡ್ಡಕ್ಕೆ ಈ ಬಸ್ ಗಳು ಸಂಚರಿಸಲಿವೆ. ಈಗಾಗಲೇ ದೇವಿಯ ವಾರದ ನಿಮಿತ್ತ ನವೆಂಬರ್ 19ರಂದು ಮಂಗಳವಾರ 18 ವಿಶೇಷ ಹೆಚ್ಚುವರಿ ಬಸ್ ಓಡಿಸಲಾಗಿದೆ. ಇದೀಗ ಬರುವ ಶುಕ್ರವಾರ ಹಾಗೂ ಮಂಗಳವಾರದಂದು ಸಹ ಹುಬ್ಬಳ್ಳಿಯಿಂದ ಯಲ್ಲಮ್ಮ ಗುಡ್ದಕ್ಕೆ ವಿಶೇಷ ಹೆಚ್ಚುವರಿ ಬಸ್ ಗಳು ಸಂಚರಿಸಲಿವೆ.

ನವೆಂಬರ್ 22, 26 ಹಾಗೂ 29ರಂದು ಹುಬ್ಬಳ್ಳಿಯ ಹೊಸೂರು ಬಸ್ ನಿಲ್ದಾಣದಿಂದ ಯಲ್ಲಮ್ಮನ ಗುಡ್ಡಕ್ಕೆ ವಿಶೇಷ ಬಸ್ ಗಳು ಸಂಚರಿಸಲಿವೆ ಎಂದು ತಿಳಿಸಿದ್ದಾರೆ.


Related Articles

Back to top button