
ಪ್ರಗತಿ ವಾಹಿನಿ ಸುದ್ದಿ ಲುಧಿಯಾನ: ಅತ್ತಿಗೆಯ ಜೊತೆ ಲೈಂಗಿಕ ಸಂಪರ್ಕ ಹೊಂದುವ ಸಲುವಾಗಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬನನ್ನು ಲುಧಿಯಾನದ ಪೊಲೀಸರು ಬಂಧಿಸಿದ್ದಾರೆ.
ತನ್ನ ಮೈದುನನಿಂದ ನಿರಂತರ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಲುಧಿಯಾನದ ಬಾವಾ ಕಾಲೋನಿಯ ನಿವಾಸಿ 26 ವರ್ಷದ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಾರೆ.
ಐದು ವರ್ಷದ ಹಿಂದೆ ನನ್ನ ಮದುವೆಯಾಗಿದೆ. ಪ್ರಾರಂಭದಿಂದಲೂ ಮೈದುನನಿಂದ ಕಿರುಕುಳ ಅನುಭವಿಸುತ್ತಲೇ ಇದ್ದೇನೆ. ಈ ಬಗ್ಗೆ ಗಂಡನ ಬಳಿ ದೂರಿದೂ ಯಾವುದೇ ಪ್ರಯೋಜನವಾಗಿಲ್ಲ. ಗಂಡನಿಂದ ಯಾವುದೇ ಪ್ರತಿಕ್ರಿಯೆಯೂ ಬಂದಿಲ್ಲ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಲುಧಿಯಾನ ಪೊಲೀಸರು ಮೈದುನನ್ನು ಐಪಿಸಿ ಸೆಕ್ಷನ್ ೩೫೪ರ ಅಡಿ ಬಂಧಿಸಿ ವಿಚಾರಣೆ ನಡೆಸಿದ್ದಾರೆ.
ಮಾವಿನ ಹಣ್ಣಿನ ಮಾರುಕಟ್ಟೆ ನಮ್ಮದಾಗಬೇಕು; ರಾಜ್ಯದಲ್ಲಿ ಆರಂಭವಾಯ್ತು ಹೊಸ ಅಭಿಯಾನ