Latest

ಮಾವಿನ ಹಣ್ಣಿನ ಮಾರುಕಟ್ಟೆ ನಮ್ಮದಾಗಬೇಕು; ರಾಜ್ಯದಲ್ಲಿ ಆರಂಭವಾಯ್ತು ಹೊಸ ಅಭಿಯಾನ

ಪ್ರಗತಿವಾಹಿನಿ ಸುದ್ದಿ; ಹಾಸನ: ಹಿಂದೂ ದೇವಾಲಯಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿರ್ಬಂಧ, ಹಲಾಲ್, ಜಟ್ಕಾ ಕಟ್ ವಿವಾದದ ಬೆನ್ನಲ್ಲೇ ಇದೀಗ ಮಾವಿನ ಹಣ್ಣಿನ ಮಾರ್ಕೇಟ್ ಆರಂಭಕ್ಕಾಗಿ ಹಿಂದೂ ಸಂಘಟನೆ ಕಾರ್ಯಕರ್ತರು ವಿಶೇಷ ಅಭಿಯಾನ ಆರಂಭಿಸಿದ್ದಾರೆ.

ಹಲಾಲ್ ವಿವಾದ ಬಳಿಕ ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧ ನಿಟ್ಟಿನಲ್ಲಿ ಮಂದಿರಗಳಲ್ಲಿ ಜೈ ಶ್ರೀರಾಮ್, ಓಂ ನಮ: ಶಿವಾಯ ಹೇಳುವುದಾಗಿ ಎಚ್ಚರಿಕೆ ನೀಡಿದ್ದ ಹಿಂದೂ ಸಂಘಟನೆ ಕಾರ್ಯಕರ್ತರು ಇದೀಗ ಮಾವಿನ ಹಣ್ಣುಗಳ ಹೋಲ್ ಸೇಲ್ ಮಾರುಕಟ್ಟೆ ಹಿಂದೂಗಳ ಪಾಲಾಗಬೇಕು ಎಂದು ಅಭಿಯಾನ ಆರಂಭಿಸಿದ್ದಾರೆ.

Home add -Advt

ಹಾಸನ ಜಿಲ್ಲೆಯಲ್ಲಿ ಹಿಂದೂ ಸಂಘಟನೆ ಯುವಕರು ಸಾಮಾಜಿಕ ಜಾಲತಾಣಗಳಲ್ಲಿ ಈ ನಿಟ್ಟಿನಲ್ಲಿ ಪೋಸ್ಟರ್ ಗಳನ್ನು ಹಾಕುತ್ತಿದ್ದು, ಭಾರಿ ವೈರಲ್ ಆಗುತ್ತಿದೆ.
ಹೆಚ್.ಡಿ.ಕೆ ಆಧಾರರಹಿತ ಹೇಳಿಕೆಗೆ ಉತ್ತರಿಸಲ್ಲ; ಸಿಎಂ ತಿರುಗೇಟು

Related Articles

Back to top button