ಪ್ರಗತಿ ವಾಹಿನಿ ಸುದ್ದಿ; ಮುಂಬೈ: ಟೀಂ ಇಂಡಿಯಾದ ಮಾಜಿ ಕೋಚ್, ಖ್ಯಾತ ಸ್ಪಿನ್ನರ ಅನೀಲ್ ಕುಂಬ್ಳೆ ಕುರಿತು ವಿರಾಟ್ ಕೋಹ್ಲಿ ಮಾಡಿದ್ದ ಗಂಭೀರ ಆರೋಪವೊಂದು ವಿನೋದ್ ರಾಯ್ ಬರೆದ ಪುಸ್ತಕದ ಮೂಲಕ ಬೆಳಕಿಗೆ ಬಂದಿದೆ.
ಐದು ವರ್ಷಗಳ ಹಿಂದೆ ಐಪಿಎಲ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ಮತ್ತು ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ ಟೀಂ ಇಂಡಿಯಾದ ಸಂಪೂರ್ಣ ಉಸ್ತುವಾರಿ ವಹಿಸುವಂತೆ ಐಎಎಸ್ ಅಧಿಕಾರಿಯೂ ಆಗಿದ್ದ ಆಡಿಟರ್ ಜನರಲ್ ವಿನೋದ್ ರಾಯ್ ಅವರಿಗೆ ಸುಪ್ರಿಂ ಕೋರ್ಟ್ ಕೇಳಿಕೊಂಡಿತ್ತು. ಆ ಮೂಲಕ ಬಿಸಿಸಿಐನ ಮೇಲುಸ್ತುವಾರಿಯಾಗಿ ನೇಮಕಗೊಂಡ ವಿನೋದ್ ರಾಯ್ ತಮ್ಮ ಅಲ್ಪ ಅವಧಿಯ ಟೀಂ ಇಂಡಿಯಾ ಜೊತೆಗಿನ ಅನುಭವವನ್ನು ನಾಟ್ ಜಸ್ಟ್ ಎ ನೈಟ್ ವಾಚ್‌ಮನ್- ಮೈ ಇನ್ನಿಂಗ್ಸ್ ಇನ್ ದಿ ಬಿಸಿಸಿಐ ಎಂಬ ಪುಸ್ತಕ ಬರೆಯುವ ಮೂಲಕ ಹಂಚಿಕೊAಡಿದ್ದಾರೆ. ರೂಪಾ ಪಬ್ಲಿಕೇಶನ್ಸ್ ಈ ಪುಸ್ತಕ ಪ್ರಕಟಿಸಿದೆ.
ಅನೀಲ್ ಕುಂಬ್ಳೆಯ ಅತೀ ಶಿಸ್ತಿನ ಬಗ್ಗೆ ಕೋಹ್ಲಿ ಆರೋಪ
ಪುಸ್ತಕದಲ್ಲಿ ಟೀಂ ಇಂಡಿಯಾದ ಆಗಿನ ಕೋಚ್ ಅನೀಲ್ ಕುಂಬ್ಳೆ ಮತ್ತು ನಾಯಕರಾಗಿದ್ದ ವಿರಾಟ್ ಕೋಹ್ಲಿ ನಡುವಿನ ಸಂಬAಧ ಅಷ್ಟೇನೂ ಉತ್ತಮವಾಗಿರಲಿಲ್ಲ ಎಂದು ಬರೆದಿದ್ದಾರೆ.
ಅನೀಲ್ ಕುಂಬ್ಳೆಯ ಅತೀ ಶಿಸ್ತಿಗೆ ಯುವ ಆಟಗಾರರು ಹೆದರಿಹೋಗಿದ್ದಾರೆ ಎಂಬ ಗಂಭೀರ ಆರೋಪವನ್ನು ಕೋಹ್ಲಿ ಆ ಸಂದರ್ಭದಲ್ಲಿ ಕುಂಬ್ಳೆ ಮೇಲೆ ಮಾಡಿದ್ದರು. ಈ ಕುರಿತು ಅನೀಲ್ ಕುಂಬ್ಳೆ ಜೊತೆ ನಾನು ಚರ್ಚಿಇದಾಗ ತಂಡದ ಒಳಿತಿಗಾಗಿ ನಾನು ಅಗತ್ಯ ಶಿಸ್ತು ಪಾಲಿಸುವಂತೆ ಸೂಚಿಸಿದ್ದೇನೆ ಹೊರತು ಬೇರೇನಿಲ್ಲ ಎಂದು ಉತ್ತರಿಸಿದ್ದರು.
ಬಳಿಕ ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸ ಹಮ್ಮಿಕೊಂಡು ಮರಳಿತು. ಈ ವೇಳೆಗಾಗಲೇ ವಿರಾಟ್ ಕೋಹ್ಲಿ ಆರೋಪಗಳು ಮತ್ತಷ್ಟು ಬಿರುಸಾಗಿದ್ದವು. ನಾವು (ಬಿಸಿಸಿಐ) ಅನೀಲ್ ಕುಂಬ್ಳೆ ಜೊತೆ ವಿದ್ಯಮಾನದ ಬಗ್ಗೆ ಸುದೀರ್ಘವಾಗಿ ಚರ್ಚಿಸಿದೆವು. ಕುಂಬ್ಳೆ ಬಹಳ ಖೇದಗೊಂಡಿದ್ದರು. ತಂಡದಲ್ಲಿ ಶಿಸ್ತು ತರುವುದು ಮುಖ್ಯ ಕೋಚ್‌ನ ಕೆಲಸ ನಾನು ಅದನ್ನೇ ಮಡಿದ್ದೇನೆ. ತಂಡದ ನಾಯಕ ಮತ್ತು ಸಹ ಆಟಗಾರರ ಅಭಿಪ್ರಾಯಗಳಿಗೆ ಅತಿಯಾದ ಪ್ರಾಮುಖ್ಯತೆ ನೀಡಬಾರದು ಎಂದು ಕುಂಬ್ಳೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂಬುದಾಗಿ ವಿನೋದ್ ರಾಯ್ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್; ತುಟ್ಟಿಭತ್ಯೆ ಹೆಚ್ಚಳ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ