Latest

ಮಾಲಕನ ತಾಯಿಯನ್ನೇ ಕೊಂದ ಯುವಕ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಕೆಲಸಕ್ಕಿದ್ದ ಅಂಗಡಿಯ ಮಾಲಕನ ತಾಯಿಯನ್ನೇ ಕೊಂದ ಪ್ರಕರಣದಲ್ಲಿ 18 ವರ್ಷದ ಯುವಕನೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ರೋಹಿತ್ ದುಬೆ ಬಂಧಿತ ಆರೋಪಿ.

ಪ್ರಕರಣದ ಹಿನ್ನೆಲೆ
ದೆಹಲಿಯ ಪಶ್ಚಿಮ ವಿಹಾರ್‍ದಲ್ಲಿ ಸರೋಜ್ ಜೈನ್ (46) ಎಂಬುವವರು ಅಂಗಡಿ ನಡೆಸುತ್ತಿದ್ದಾರೆ. ಇವರ ಅಂಗಡಿಯಲ್ಲಿ ಕಳೆದ ಫೆ.3ರಂದು ಮಧ್ಯಪ್ರದೇಶ ಮೂಲದ ರೋಹಿತ್ ದುಬೆ ಕೆಲಸಕ್ಕೆ ಸೇರಿದ್ದ. ಗುರುವಾರ ಬೆಳಗ್ಗೆ ರೋಹಿತ್ ಅಂಗಡಿಯಲ್ಲಿದ್ದ 90 ಸಾವಿರ ರೂ.ಗಳನ್ನು ಕದ್ದು ಅಂಗಡಿಯಲ್ಲೇ ಬಚ್ಚಿಟ್ಟಿದ್ದ. ಇದನ್ನು ಅರಿಯದ ಸರೋಜ್ ಜೈನ್ ರೋಹಿತ್‍ನನ್ನು ಅದೇ ಏರಿಯಾದಲ್ಲಿರುವ ತನ್ನ ಮನೆಗೆ ಸಾಮಾನು ತರಲು ಕಳುಹಿಸಿದ್ದರು. ಮನೆಗೆ ತೆರಳಿದ ರೋಹಿತ್ ಅಲ್ಲಿದ್ದ ಕಪಾಟು ತೆರೆದು ಮತ್ತೆ 20 ಸಾವಿರ ರೂ. ಗಳನ್ನು ದೋಚಲು ಯತ್ನಿಸಿದ್ದ. ಇದನ್ನು ನೋಡಿದ ಸರೋಜ್ ಜೈನ್‍ರ ತಾಯಿ ರೋಹಿತ್‍ನನ್ನು ತಡೆಯಲು ಯತ್ನಿಸಿದ್ದಾಳೆ. 20 ಸಾವಿರ ಹಣದೊಂದಿಗೆ ರೋಹಿತ್ ಮನೆಯಿಂದ ಹೊರ ಬೀಳುತ್ತಿದ್ದಂತೆ ಗಲಾಟೆ ಕೇಳಿದ ಸರೋಜ್ ಅಂಗಡಿಯಿಂದ ಮನೆಯತ್ತ ಧಾವಿಸಿದ್ದಾರೆ. ಈ ವೇಳೆ ರೋಹಿತ್ ಅಂಗಡಿಯಲ್ಲಿ ಬಚ್ಚಿಟ್ಟುಕೊಂಡಿದ್ದ 90 ಸಾವಿರ ರೂ. ತೆಗೆದುಕೊಳ್ಳಲು ಅಂಗಡಿಯತ್ತ ನುಗ್ಗಿದ್ದಾನೆ. ಅಂಗಡಿಯಲ್ಲಿದ್ದ ಇತರ ಕೆಲಸಗಾರರು ರೋಹಿತ್‍ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ನಿವೃತ್ತ ASI ಬರ್ಬರ ಹತ್ಯೆ; ಮಗನಿಂದಲೇ ಕೃತ್ಯ; ಕಾರಣವೇನು ಗೊತ್ತೇ?

Home add -Advt

Related Articles

Back to top button