Kannada NewsKarnataka NewsLatest
*ಮನೆ ಬಳಿ ಆಟವಾಡುತ್ತಿದ್ದ ಮಗುವನ್ನು ಓಡಿ ಬಂದು ಕಾಲಿನಿಂದ ಜಾಡಿಸಿ ಒದ್ದ ದುರುಳ…!*

ಪ್ರಗತಿವಾಹಿನಿ ಸುದ್ದಿ: ಮನೆಯ ಮುಂದೆ ಆಟವಾಡುತ್ತಿದ್ದ ಮಗುವನ್ನು ವ್ಯಕ್ತಿಯೊಬ್ಬ ಜಾಡಿಸಿಸಿ ಒದ್ದಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಮನೆಯ ಮುಂದೆ ಮೂರ್ನಾಲ್ಕು ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ಬರುತ್ತಿದ ವ್ಯಕ್ತಿ ಓಡಿ ಬಂದು ಆಟವಾಡುತ್ತಿದ್ದ ಮಗುವನ್ನು ಜಾಡಿಸಿ ಒದ್ದು ಏನೂ ಗೊತ್ತಿಲ್ಲದಂತೆ ಮುಂದೆ ಸಾಗಿದ್ದಾನೆ. ರಸ್ತೆಯಲ್ಲಿ ಬಿದ್ದ ಮಗು ಗಂಭೀರವಾಗಿ ಗಾಯಗೊಂಡಿದ್ದು, ಮಗುವಿನ ತಾಯಿ ಬಂದು ಮಗುವನ್ನು ಎತ್ತಿದ್ದಾಳೆ.
ವ್ಯಕ್ತಿಯ ವಿಕೃತ ಮನಸ್ಥಿತಿಗೆ ಸ್ಥಳದಲ್ಲಿದ್ದ ಮಕ್ಕಳು, ಪೋಷಕರು ಕಂಗಾಲಾಗಿದ್ದಾರೆ. ಡಿಸೆಂಬರ್ 14ರಂದು ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬನಶಂಗರಿಯ ತ್ಯಾಗರಾಜನಗರದಲ್ಲಿ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯ ಹಾಗೂ ಬಾಲಕನ ಪೋಷಕರ ದೂರಿನ ಮೇರೆಗೆ ಸದ್ಯ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ರಂಜನ್ ಎಂಬ ವ್ಯಕ್ತಿ ಮಗುವನ್ನು ಕಾಲಿನಿಂದ ಒದ್ದು ದುಷ್ಕೃತ್ಯವೆಸಗಿದವನು ಎಂದು ತಿಳಿದುಬಂದಿದೆ.




