Kannada NewsLatest

*ಬೆಳಗಾವಿ: ಲಾಡ್ಜ್ ನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ವ್ಯಕ್ತಿ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವ್ಯಕ್ತಿಯೋರ್ವರು ಲಾಡ್ಜ್ ವೊಂದರಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನಲ್ಲಿ ನಡೆದಿದೆ.

ಮೃತರನ್ನು ಬಾಗಲಕೋಟೆಯ ಹುನಗುಂದ ತಾಲೂಕಿನ ಚಿತ್ತರಗಿ ಗ್ರಾಮದ ಯಲ್ಲಪ್ಪ ತಿರ್ಲಾಪುರ ಎಂದು ಗುರುತಿಸಲಾಗಿದೆ. ಕಳೆದ 15 ದಿನಗಳಿಂದ ಯಲ್ಲಪ್ಪ ಚಿತ್ತರಗಿಯಿಂದ ಕಾಣೆಯಾಗಿದ್ದರು ಎಂದು ಅವರ ಸಂಬಂಧಿಕರು ಹೇಳಿದ್ದಾರೆ.

ಕಳೆದ ಎರಡು ದಿನಗಳಿಂದ ರಾಮದುರ್ಗದ ಹಳೇ ಬಸ್ಟ್ಯಾಂಡ್ ಬಳಿಯ ನಾಯಕ ಲಾಡ್ಜ್ ನಲ್ಲಿ ಕಾಲ ಕಳೆಯುತ್ತಿದ್ದರು. ಆದರೆ ಈಗ ಲಾಡ್ಜ್ ರೂಮಿನಲ್ಲಿ ಯಲ್ಲಪ್ಪ ಸಾವನ್ನಪ್ಪಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಲಾಡ್ಜ್ ಸಿಬ್ಬಂದಿ ರೂಮ್ ಕ್ಲೀನ್ ಮಾಡಲು ಹೋಗಿದ್ದಾಗ ಯಲ್ಲಪ್ಪ ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ರಾಮದುರ್ಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ವೇಳೆ ಎರಡು ಮೂರು ದಿನಗಳಿಂದ ಲಾಡ್ಜ್ ನಲ್ಲಿ ಯಲ್ಲಪ್ಪ ಇರುವುದಾಗಿ ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

*ನಟಿ ಅಭಿನಯ ಸೇರಿದಂತೆ ಮೂವರಿಗೆ ಜೈಲುಶಿಕ್ಷೆ; ಹೈಕೋರ್ಟ್ ಮಹತ್ವದ ತೀರ್ಪು*

https://pragati.taskdun.com/actress-abhinaya2-yers-jailhigh-courtdowry-harassment-case/

*ಭೀಕರ ಅಪಘಾತ: ಖ್ಯಾತ ಯಕ್ಷಗಾನ ಭಾಗವತ ತಿಮ್ಮಪ್ಪ ಹೆಗಡೆ ದುರ್ಮರಣ*

https://pragati.taskdun.com/yakshagana-bhagavatatimmappa-hegadedeathaacident/

* ಗಡಿ ವಿವಾದ ಮಹಾರಾಷ್ಟ್ರಕ್ಕೆ ರಾಜಕೀಯ ವಸ್ತುವಾಗಿದೆ; ಸಿಎಂ ಬೊಮ್ಮಾಯಿ ಕಿಡಿ*

https://pragati.taskdun.com/karnataka-maharashtra-border-issuecm-basavaraj-bommaiamith-shahmeet/

Related Articles

Back to top button