ಪ್ರಗತಿವಾಹಿನಿ ಸುದ್ದಿ; ರಾಂಪುರ: ಟಿ-20 ವಿಶ್ವಕಪ್ ನಲ್ಲಿ ಭಾರತದ ವಿರುದ್ಧ ಪಾಕಿಸ್ತಾನ ಗೆಲುವು ಸಾಧಿಸಿದ್ದಕ್ಕೆ ಪತ್ನಿ ಸಂಭ್ರಮಿಸಿದ ಕಾರಣಕ್ಕೆ ಆಕೆ ಹಾಗೂ ಆಕೆಯ ಕುಟುಂಬದ ವಿರುದ್ಧ ಪತಿ ಮಹಾಶಯ ದೂರು ದಾಖಲಿಸಿರುವ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ನಡೆದಿದೆ.
ಅಕ್ಟೋಬರ್ 24ರಂದು ನಡೆದ ಪಂದ್ಯದಲ್ಲಿ ಭಾರತ ಸೋಲನುಭವಿಸಿದ ಬಳಿಕ ಟೀಂ ಇಂಡಿಯಾವನ್ನು ಅಣಕಿಸಿ, ಪಾಕಿಸ್ತಾನದ ಗೆಲುವು ಸಂಭ್ರಮಿಸಿದ್ದಾರೆ ಎಂದು ಆರೋಪಿಸಿ ಇಶಾನ್ ಮಿಯಾ ಎಂಬಾತ ತನ್ನ ಪತ್ನಿ ಹಾಗೂ ಆಕೆಯ ಕುಟುಂಬದವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಇದೀಗ ಎಫ್ ಐ ಆರ್ ಕೂಡ ದಾಖಲಾಗಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನದ ವಿಜಯದ ಸಂಭ್ರಮದ ಬಗ್ಗೆ ವಾಟ್ಸಪ್ ಸ್ಟೇಟಸ್ ಹಾಕಿ ಸಂಭ್ರಮಿಸಿದ್ದಾಗಿ ಇಶಾನ್ ದೂರು ನೀಡಿದ್ದಾರೆ. ಇಶಾನ್ ಹಾಗೂ ಪತ್ನಿ ರಬಿಯಾ ಶಂಸಿ ಮದುವೆಯಾಗಿ ಕೆಲದಿನಗಳಲ್ಲೇ ಬೇರೆಯಾಗಿದ್ದರಲ್ಲದೇ, ಪತ್ನಿ ಆಕೆಯ ತಂದೆ-ತಾಯಿ ಜೊತೆ ವಾಸವಾಗಿದ್ದಳು ಎನ್ನಲಾಗಿದೆ.
ಉತ್ತರ ಪ್ರದೇಶದಲ್ಲಿ ಪಾಕಿಸ್ತಾನದ ಗೆಲುವನ್ನು ಸಂಭ್ರಮಿಸಿದರೆ ಅವರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲು ಮಾಡಲಾಗುವುದು ಎಂದು ಸಿಎಂ ಯೋಗಿ ಆದಿತ್ಯನಾಥ್ ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ಲಖನೌದಲ್ಲಿ ಮೂವರು ಇಂಜಿನಿಯರಿಂಗ್ ವಿದ್ಯಾರ್ಥಿಗಳನ್ನು ಕೂಡ ಬಂಧಿಸಲಾಗಿತ್ತು.
ಓರ್ವ ಮೀನುಗಾರನ ಹತ್ಯೆ; 6 ಜನರನ್ನು ಅಪಹರಿಸಿದ ಪಾಕಿಸ್ತಾನಿ ನೌಕಾಪಡೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ