
ಪ್ರಗತಿವಾಹಿನಿ ಸುದ್ದಿ, ಗಾಂಧಿನಗರ: ದೇವಾಲಯವೊಂದರಲ್ಲಿರುವ ಆನೆ ಪ್ರತಿಮೆಯಡಿಯಿಂದ ತೆವಳಲು ಹೋಗಿದ್ದ ವ್ಯಕ್ತಿಯೊಬ್ಬರು ಅದರ ಕಾಲುಗಳ ಮಧ್ಯೆ ಸಿಲುಕಿ ಹೊರಬರಲಾಗದೆ ಪೇಚಾಡಿದ ಪ್ರಸಂಗ ನಡೆದಿದೆ.
ಮೊದಲಿಗೆ ವ್ಯಕ್ತಿ ನೆಲದ ಮೇಲೆ ದೀರ್ಘದಂಡ ಪ್ರಣಾಮ ಹಾಕಿ ಮಲಗಿ ತೆವಳುತ್ತ ಆನೆ ಪ್ರತಿಮೆಯ ಹೊಟ್ಟೆ ಭಾಗದ ಕೆಳಗಿಂದ ಮಧ್ಯೆ ಹೊಕ್ಕಿದ್ದಾರೆ. ಸಣ್ಣ ಪ್ರತಿಮೆಯ ಇಕ್ಕಟ್ಟಾದ ಕಾಲುಗಳ ಮಧ್ಯೆ ಅರ್ಧ ದೇಹ ಹೊರಬಂದ ನಂತರ ಇನ್ನರ್ಧ ಸಿಲುಕಿಹಾಕಿಕೊಂಡು ಪೇಚಾಡಿದ್ದಾರೆ.
ಇದನ್ನು ಕಂಡ ದೇಗುಲದ ಪೂಜಾರಿ ಸಹಿತ ಕೆಲವರು ವ್ಯಕ್ತಿಯನ್ನು ಹೊರಗೆಳೆಯಲು ಹೋಗಿ ಹಣ್ಣುಗಾಯಿ ನೀರುಗಾಯಿ ಆಗಿದ್ದಾರೆ. ದೇಗುಲಕ್ಕೆ ಬಂದ ಅವರಿವರಿಂದ ಸಲಹೆ ಕೇಳಿದ್ದಾರೆ. ಕೆಲವರು ನಿಂತಲ್ಲಿಂದಲೇ “ಐಸೇ ಬಾಹರ್ ಆಜಾವ್.. ಘುಮಾಘುಮಾಕೇ..” ಎಂದೆಲ್ಲ ಸಲಹೆಗಳನ್ನು ನೀಡಿದ್ದಾರೆ.
ಹರಕೆ ತೀರಿಸಲು ಹೋಗಿ ‘ಹರಹರಾ.. ಶಿವಶಿವಾ..’ ಎಂದು ಕಣ್ಣೀರಿಡುವ ಪರಿಸ್ಥಿತಿಗೆ ಬಂದ ವ್ಯಕ್ತಿಯನ್ನು ಹೇಗೆ ಹೊರತೆಗೆಯಲಾಯಿತು ಎಂಬುದು ಮಾತ್ರ ವಿಡಿಯೊದಲ್ಲಿ ದಾಖಲಾಗಿಲ್ಲ.
ಈ ವಿಡಿಯೋ ಈಗ ಸಖತ್ ವೈರಲ್ ಆಗಿದ್ದು ವ್ಯಕ್ತಿಯ ಪೇಚಾಟ ಪ್ರಸಂಗ ಜಾಲತಾಣಿಗರ ಪಾಲಿಗೆ ರಂಜನೆ ಜೊತೆಗೆ ಪಾಠವಾಗಿದೆ. 2019ರಲ್ಲಿಯೂ ಮಹಿಳೆಯೊಬ್ಬರು ಈ ರೀತಿಯ ಹರಕೆ ತೀರಿಸಲು ಹೋಗಿ ಸಿಲುಕಿಕೊಂಡು ಹೆಣಗಾಟ ನಡೆಸಿ ಹೊರಬಂದಿದ್ದರು.
ಬೆಳಗಾವಿ ಸೇರಿದಂತೆ ರಾಜ್ಯದಲ್ಲಿ ಭಾರಿ ಮಳೆ ಎಚ್ಚರಿಕೆ