ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಚಿನ್ನದ ಕಳ್ಳಸಾಗಣೆಗೆ ಈವರೆಗೆ ನಾನಾ ರೀತಿಯ ಚೋರರು ಬಹುವಿಧಗಳ ಚಾಲಾಕಿತನ ತೋರಿದ್ದಿದೆ. ಕೆಲವರಂತೂ ಚಿನ್ನವನ್ನೇ ನುಂಗಿ ಹೊಟ್ಟೆಯಲ್ಲಿಟ್ಟುಕೊಂಡು ವಿಮಾನ ಏರಿದರೆ, ಒಂದಿಷ್ಟುಜನ ಗುಪ್ತಾಂಗವನ್ನೂ ಚಿನ್ನದ ಸ್ಮಗ್ಲಿಂಗ್ ಗಾಗಿ ಬಳಸಿ ಸಿಕ್ಕಿಬಿದ್ದಿದ್ದಿದೆ.
ಇಂಥದ್ದರಲ್ಲಿ ಇಲ್ಲೊಬ್ಬ ಚಾಲಾಕಿ ಒಳಉಡುಪಿನಲ್ಲಿ 1,147 ಗ್ರಾಂ ಚಿನ್ನ ಬಚ್ಚಿಟ್ಟುಕೊಂಡು ಕಳ್ಳಸಾಗಣೆಗೆ ಯತ್ನಿಸಿ ಈಗ ಕಂಬಿ ಎಣಿಸುತ್ತಿದ್ದಾನೆ. ಈ ವ್ಯಕ್ತಿಯನ್ನು ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
ಮಸ್ಕತ್ನಿಂದ ಬಂದಿದ್ದ ಪುರುಷ ಪ್ರಯಾಣಿಕನನ್ನು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆಗೆ ಗುರಿಪಡಿಸಿದಾಗ ಆರೋಪಿಯು ತನ್ನ ಒಳ ಉಡುಪುಗಳಲ್ಲಿ ಕಪ್ಪು ಪ್ಲಾಸ್ಟಿಕ್ ಕವರ್ನಲ್ಲಿ ಪೇಸ್ಟ್ ರೂಪದಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದು ಪತ್ತೆಯಾಗಿದೆ.
ಈತನನ್ನು ವಶಕ್ಕೆ ಪಡೆದಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬೆಂಗಳೂರು ಏರ್ ಕಸ್ಟಮ್ಸ್ ತಿಳಿಸಿದೆ. ಈ ವಿಷಯವನ್ನು ಏರ್ ಕಸ್ಟಮ್ಸ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದೆ.
ಗುಜರಾತ್ ಫಲಿತಾಂಶ: ಸಾರ್ವಕಾಲಿಕ ದಾಖಲೆ ಬರೆದ BJP
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ