ತದ್ರೂಪಿ ಅವಳಿ ಸಹೋದರಿಯರನ್ನು ಮದುವೆಯಾದ ಯುವಕ, ಕೇಸ್ ದಾಖಲು !

ಪ್ರಗತಿವಾಹಿನಿ ಸುದ್ದಿ, ಸೋಲಾಪುರ:
ಒಂದೇ ರೀತಿ ಕಾಣುವ ಮುಂಬೈನ ಅವಳಿ ಸಹೋದರಿಯರನ್ನು ಸೋಲಾಪುರದ ಯುವಕನೊಬ್ಬ ವಿವಾಹವಾಗಿದ್ದು, ಮದುವೆ ವೀಡಿಯೋ ವೈರಲ್ ಆಗಿದೆ. ಇಬ್ಬರು ಯುವತಿಯರನ್ನು ಮದುವೆಯಾದ ಕಾರಣ ಪೊಲೀಸ್ ದೂರು ಸಹ ದಾಖಲಾಗಿದೆ.
ಮುಂಬೈ ಮೂಲದ ತದ್ರೂಪಿ ಅವಳಿಗಳಾದ ಪಿಂಕಿ ಮತ್ತು ರಿಂಕಿ (36) ಐಟಿ ಕಂಪನಿಯ ಉದ್ಯೋಗಿಗಳಾಗಿದ್ದಾರೆ. ಈ ಇಬ್ಬರೂ ಅವಳಿ ಸಹೋದರಿಯರು ಸೋಲಾಪುರದ ಅತುಲ್ ಎಂಬ ಯುವಕನ ಜತೆ ವಿವಾಹವಾಗಿದ್ದಾರೆ.
ನೋಡಲು ಒಂದೇ ರೀತಿ ಕಾಣುವ ಅವಳಿ ಸಹೋದರಿಯರು ಒಂದೇ ವ್ಯಕ್ತಿಯನ್ನು ವಿವಾಹವಾಗುತ್ತಿರುವುದು ಜನರಲ್ಲಿ ಕುತೂಹಲ ಕೆರಳಿಸಿದೆ. ಈ ಕಾರಣಕ್ಕಾಗಿ ಮದುವೆಯ ವಿಡಿಯೋ ವೈರಲ್ ಆಗಿದೆ. ಆದರೆ ಪೊಲೀಸರು ಇವರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈಗ ಸಾಮಾಜಿಕ ಜಾಲ ತಾಣದಲ್ಲಿ ಮದುವೆ ವೀಡಿಯೋ ಜತೆಗೆ ಇದು ಕಾನೂನು ಬದ್ಧ ಹೌದೋ ಅಲ್ಲವೋ ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

ಮತ್ತೆ ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

https://pragati.taskdun.com/karnatakarainalerttomorrow/

Home add -Advt

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button