ಪ್ರಗತಿವಾಹಿನಿ ಸುದ್ದಿ; ಚಿಕ್ಕಬಳ್ಳಾಪುರ : ಮದುವೆಯಾಗಿ ಮಕ್ಕಳಿದ್ರೂ, ಮತ್ತೋರ್ವ ವಿವಾಹಿತೆಯ ಬೆನ್ನು ಬಿದ್ದಿದ್ದ ವ್ಯಕ್ತಿಯೋರ್ವ ಇದೀಗ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರದ ಕೋಟೆ ಬಡಾವಣೆಯಲ್ಲಿ ನಡೆದಿದೆ
ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಹೆಸರು ನವೀನ್ (27) ಎಂದು ತಿಳಿದುಬಂದಿದೆ. ಈತನಿಗೆ ಮದುವೆಯಾಗಿ ಮಕ್ಕಳಿದ್ರೂ, ಮತ್ತೋರ್ವ ವಿವಾಹಿತೆಯ ಬೆನ್ನು ಬಿದ್ದಿದ್ದ. ಪ್ರೀತ್ಸೆ ಪ್ರೀತ್ಸೆ ಅಂತ ಆಕೆಯನ್ನು ಕಾಡತೊಡಗಿದ್ದ.
ಸಾಲದೆಂಬಂತೆ ಆಕೆಯ ಹೆಸರನ್ನು ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ. ಐ ಲವ್ ಯೂ ಅಂತ ಪ್ರತಿ ದಿನವೂ ಮೆಸೇಜ್ ಮಾಡಿ ಪೀಡಿಸುತ್ತಿದ್ದ. ಸ್ವತಃ ಆಕೆಯ ಗಂಡನ ಮುಂದೆನೇ ನವೀನ್, ಲವ್ ಮಾಡು ಲವ್ ಮಾಡು ಅಂತಾ ಹಿಂಸಿಸುತ್ತಿದ್ದ. ಹೀಗಾಗಿ ಎರಡು ಕುಟುಂಬಗಳ ಮಧ್ಯೆ ಗಲಾಟೆ ನ್ಯಾಯ ಪಂಚಾಯತಿ ಸಹ ಆಗಿದೆ ಎನ್ನಲಾಗಿದೆ. ಆದರೆ ಅದೆನಾಯ್ತೋ ಏನೋ ಈಗ ಆತ ತನ್ನ ತಾಯಿಯ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು, ಇದಕ್ಕೆಲ್ಲಾ ಆಕೆಯೇ ಕಾರಣ ಎನ್ನುವ ಆರೋಪ ಕೇಳಿಬಂದಿದೆ.
ಇತ್ತೀಚೆಗೆ ಆಕೆ. ನವೀನ್ ಕಾಟ ತಾಳಲಾರದೆ ಫೋನ್ ಬಳಸುವುದನ್ನೆ ಬಿಟ್ಟಿದ್ದಳಂತೆ, ಇದರಿಂದಾಗಿ ಮನನೊಂದು ನವೀನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ. ಆದರೆ ಮೃತನ ಸಂಬಂಧಿಗಳು ಇದಕ್ಕೆಲ್ಲಾ ಆಕೆಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಘಟನೆಯ ಕುರಿತು ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
*ಪಾರಂಪರಿಕ ಕಟ್ಟಡಗಳ ದುರಸ್ತಿ ಮತ್ತು ಸಂರಕ್ಷಣೆಗೆ ಕ್ರಮ*
https://pragati.taskdun.com/belagavividanaparishathsession/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ